ಉಡುಪಿ: ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖರ ಮುಖಾಮುಖಿ

Update: 2018-04-23 17:51 GMT

ಉಡುಪಿ, ಮೇ 23: ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನ ಆಗಿರುವು ದರಿಂದ ಬಹುತೇಕ ಪ್ರಮುಖರು ಇಂದೇ ನಾಮಪತ್ರ ಸಲ್ಲಿಸಲು ದಿನ ನಿಗದಿ ಪಡಿಸಿದ ಪರಿಣಾಮ ಬನ್ನಂಜೆಯ ಹಳೆ ಜಿಪಂ ಕಟ್ಟಡದಲ್ಲಿರುವ ಚುನಾವಣಾ ಕಚೇರಿ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು.

ವಿನಯಕುಮಾರ್ ಸೊರಕೆ ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಲಾಲಾಜಿ ಆರ್.ಮೆಂಡನ್ ತನ್ನ ಕಾರ್ಯಕರ್ತರ ಪಡೆಯೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದರು. ಈ ವೇಳೆ ಕಚೇರಿಯ ಗೇಟಿನಲ್ಲಿ ಸೊರಕೆ ಹಾಗೂ ಲಾಲಾಜಿ ವೆುಂಡನ್ ಪರಸ್ಪರ ಎದುರಾದರು.

ಈ ಸಂದರ್ಭದಲ್ಲಿ ಲಾಲಾಜಿ ಹಾಗೂ ಸೊರಕೆ ಪರಸ್ಪರ ಹಸ್ತಲಾಘ ಮಾಡಿ ಕೊಂಡರು. ಅದೇ ರೀತಿ ಬಿಜೆಪಿ ಮುಖಂಡರು ಕೂಡ ಸೊರಕೆಯ ಹಸ್ತಲಾಘ ಮಾಡಿದರು. ಅದೇ ರೀತಿ ಎರಡು ಪಕ್ಷಗಳ ನೂರಾರು ಸಂಖ್ಯೆಯಲ್ಲಿದ್ದ ಕಾರ್ಯ ಕರ್ತರು ಎದುರಾದ ಪರಿಣಾಮ ಚುನಾವಣಾ ಕಚೇರಿಯ ಗೇಟಿ ಬಳಿ ನೂಕು ನುಗ್ಗಲು ಉಂಟಾಯಿತು.

ಲಾಲಾಜಿ ಮೆಂಡನ್ ನಾಮಪತ್ರ ಸಲ್ಲಿಸಿ ವಾಪಾಸ್ಸು ಬರುವಾಗ ಚುನಾ ವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಬರುತ್ತಿದ್ದ ಸಚಿವ ಪ್ರಮೋದ್ ಮಧ್ವ ರಾಜ್ ಹಾಗೂ ಅವರ ತಾಯಿ ಮನೋರಮಾ ಮಧ್ವರಾಜ್ ಎದುರಾದರು. ಕೂಡಲೇ ಲಾಲಾಜಿ ಆರ್.ಮೆಂಡನ್ ಮಾಜಿ ಸಂಸದೆ ಮನೋರಮಾ ಮಧ್ವ ರಾಜ್ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ನಂತರ ಪ್ರಮೋದ್ ಮಧ್ವರಾಜ್ ಅವರಿಗೆ ಹಸ್ತಲಾಘ ಮಾಡಿದರು.

ಬಳಿಕ ಸಚಿವ ಪ್ರಮೋದ್ ಮಧ್ವರಾಜ್ ಮಧ್ವರಾಜ್ ನಾಮಪತ್ರ ಸಲ್ಲಿಸಿ ಹೊರಗೆ ಬರುವಾಗ ಚುನಾವಣಾ ಕಚೇರಿಯಲ್ಲಿ ಮಗ ರಘುಪತಿ ಭಟ್‌ಗೆ ಕಾಯುತ್ತ ಕುಳಿತಿದ್ದ ರಘುಪತಿ ಭಟ್ ಅವರ ತಾಯಿ ಸರಸ್ವತಿ ಬಡಿತ್ತಾಯ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

‘ರಘುಪತಿ ಭಟ್ ನಾನು ಕ್ಲಾಸ್‌ಮೇಟ್ ಆಗಿದ್ದೇವು. ಅವರ ತಂದೆ ತಾಯಿ ನಮಗೆ ಪರಿಚಯ. ಅವರ ತಾಯಿ ಎಲ್ಲಿ ಸಿಕ್ಕಿದರೂ ಕೂಡ ನಾನು ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆಯುತ್ತೇನೆ. ಅವರ ಇಂದಿಗೂ ಕೂಡ ನನ್ನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ಅವರ ಮಗನೆ ಚುನಾವಣೆ ನಿಲ್ಲು ವಾಗ ನಾನು ಅವರಲ್ಲಿ ಓಟು ಕೇಳುವುದು ಸರಿಯಲ್ಲ ಎಂದು ಕೇಳಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅಲ್ಲದೆ ಚುನಾವಣಾ ಕಚೇರಿಯ ಒಳಗೆ ಯಾವುದೇ ಘೋಷಣೆಗಳು ಹಾಕ ಬಾರದೆಂಬ ನಿಯಮ ಇದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ಕಚೇರಿ ಹಾಗೂ ಕಚೇರಿಯ ಆವರಣದಲ್ಲಿ ತಮ್ಮ ಪಕ್ಷ ಹಾಗೂ ನಾಯಕರ ಪರ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News