ದಲಿತ ದೌರ್ಜನ್ಯ ಕಾಯಿದೆ ದುರ್ಬಲಗೊಳಿಸುವ ಯತ್ನದ ವಿರುದ್ಧ ಪ್ರತಿಭಟನೆ ;ದಸಂಸ ಎಚ್ಚರಿಕೆ

Update: 2018-04-23 18:05 GMT

ಮಂಗಳೂರು, ಎ.23: ದಲಿತ ದೌರ್ಜನ್ಯ ಕಾಯಿದೆಯನ್ನು ದುರ್ಬಲಗೊಳಿಸುತ್ತಿರುವ ಪ್ರಯತ್ನ ಮುಂದುವರಿದರೆ ದಲಿತರ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿಯ ಮುಖಂಡ ಪಿ. ಕೇಶವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತಿ, ಅಸಮಾನತೆ ಅಸ್ಪೃಶ್ಯತೆಯಿಂದ ನೊಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮಾನ ,ಪ್ರಾಣ ರಕ್ಷಣೆಗಾಗಿ 1989ರಲ್ಲಿ ದೌರ್ಜನ್ಯ ತಡೆ ಕಾಯಿದೆ ಜಾರಿಯಾಗಿತ್ತು. ನಂತರ ಬಂದ ಸರಕಾರಗಳು ಸರಕಾರಗಳು ಜಾತಿ ನಿಂದನೆ ಪ್ರಕರಣಗಳಲ್ಲಿ ಕೇಸು ದಾಖಲಾದಾಗ ಆರೋಪಿಗೆ ನ್ಯಾಯಾಲಯದಲ್ಲಿ ಜಾಮೀನು ನೀಡಲು ಅವಕಾಶವಾಗುವ ರೀತಿಯಲ್ಲಿ ಕಾನೂನನ್ನು ಸಡಿಲುಗೊಳಿಸಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಲು ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲು ಮತ್ತು ಕಠಿಣ ಕ್ರಮ ಕೈ ಗೊಳ್ಳಲು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ಒತ್ತಾಯಿಸುವುದಾಗಿ ಮತ್ತು ಸರಕಾರ ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದರೆ ಚುನಾವಣೆಯ ಬಳಿಕ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಇದರ ಹಕ್ಕೋತ್ತಾಯ ಮತ್ತು ಹೋರಾಟ ನಡೆಸಲಿದೆ ಎಂದು ಪ್ರಕಟನೆಯಲ್ಲಿ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News