ಚಿತ್ರರಂಗ ಮಾತ್ರವಲ್ಲ, ಸಂಸತ್ತಿನಲ್ಲೂ ‘ಕಾಸ್ಟಿಂಗ್ ಕೌಚ್’ ಇದೆ: ರೇಣುಕಾ ಚೌಧರಿ ಗಂಭೀರ ಆರೋಪ

Update: 2018-04-24 11:29 GMT

ಹೊಸದಿಲ್ಲಿ, ಎ.24: ‘ಕಾಸ್ಟಿಂಗ್ ಕೌಚ್’ ಸಂಸ್ಕೃತಿ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಸತ್ತಿನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ.

ಚಿತ್ರರಂಗದಲ್ಲಿ ‘ಕಾಸ್ಟಿಂಗ್ ಕೌಚ್’ ಸಾಮಾನ್ಯವಾಗಿದೆ ಎಂದು ನೃತ್ಯ ಸಂಯೋಜಕಿ ಸರೋಜ್ ಖಾನ್ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲೇ ಈ ಹೇಳಿಕೆ ಹೊರಬಿದ್ದಿದೆ.

“ಇದು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ. ಎಲ್ಲಾ ಕಡೆಯಲ್ಲೂ ಇದು ನಡೆಯುತ್ತಿದೆ ಎನ್ನುವುದು ಸತ್ಯ. ಸಂಸತ್ತು ಅಥವಾ ಇನ್ನಿತರ ಪ್ರದೇಶಗಳೂ ಇದರಿಂದ ಹೊರತಾಗಿಲ್ಲ ಎಂದು ಊಹಿಸಬೇಡಿ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News