ಉದ್ಯೋಗಾಕಾಂಕ್ಷಿಗಳಿಗಾಗಿ ಗೂಗಲ್‌ನ ಹೊಸ ಆ್ಯಪ್ ‘ಸರ್ಚ್’

Update: 2018-04-24 15:39 GMT

ಗೂಗಲ್ ಇತ್ತೀಚಿಗೆ ‘ಸರ್ಚ್’ ಎಂಬ ಹೊಸ ಆ್ಯಪ್‌ನ್ನು ಬಿಡುಗಡೆಗೊಳಿಸಿದ್ದು,ಇದು ಸೂಕ್ತ ಉದ್ಯೋಗಾವಕಾಶಗಳನ್ನು ಹುಡುಕುವಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲಿದೆ.

ಬಳಕೆದಾರರು ಆ್ಯಂಡ್ರಾಯ್ಡ್ ಮತ್ತು ಐಒಎಸ್ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಸರ್ಚ್ ಆ್ಯಪ್‌ನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಈ ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಉದ್ಯೋಗಾಕಾಂಕ್ಷಿಗಳು ತ್ವರಿತ ಪರಿಣಾಮಗಳನ್ನು ಪಡೆಯಲು ತಾಣ,ವಿಧ ಮತ್ತು ತಾವು ಉದ್ಯೋಗವನ್ನು ಬಯಸುವ ಕ್ಷೇತ್ರ ಇತ್ಯಾದಿ ಫಿಲ್ಟರ್‌ಗಳನ್ನು ಬಳಸಬಹುದು.

ಹುಡುಕಾಟ,ಲಿಸ್ಟಿಂಗ್ ಗಳನ್ನು ಸೇವ್ ಮಾಡಲು,ಅವುಗಳನ್ನು ಶೇರ್ ಮಾಡಲು ಮತ್ತು ಅಲರ್ಟ್‌ಗಳಿಗೆ ಒಪ್ಪಿಗೆ ಸೂಚಿಸಲೂ ಈ ಆ್ಯಪ್ ಅನುವು ಮಾಡುತ್ತದೆ.

ಲಿಂಕ್ಡ್‌ಇನ್,ಕ್ವಿಕ್ರ್‌ಜಾಬ್ಸ್,ಶೈನ್ ಡಾಟ್ ಕಾಮ್‌ನಂತಹ ಹಲವಾರು ಜಾಬ್ ಸರ್ಚ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿರುವ ಗೂಗಲ್ ಸರ್ಚ್‌ನಲ್ಲಿ ಅವುಗಳನ್ನು ಸಮನ್ವಯಗೊಳಿಸಿದೆ.

ತಮ್ಮಲ್ಲಿಯ ಉದ್ಯೋಗಾವಕಾಶಗಳ ಬಗ್ಗೆ ಗಮನ ಸೆಳೆಯಲು ಸಂಸ್ಥೆಗಳಿಗೆ ನೆರವಾಗಲು ‘ಓಪನ್ ಡಾಕ್ಯುಮೆಂಟೇಷನ್’ಅನ್ನು ಕೂಡ ಗೂಗಲ್ ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News