ಭಟ್ಕಳ: 'ಪ್ರೋಗ್ರಾಮಿಂಗ್ ಲಾಜಿಕ್' ಇ-ಪುಸ್ತಕ ಬಿಡುಗಡೆ

Update: 2018-04-25 06:28 GMT

ಭಟ್ಕಳ, ಎ.25: ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರು, ರ್ಯಾಂಕ ವಿಜೇತರು, ಹಳೆ ಹಾಗೂ ಹಾಲಿ ವಿದ್ಯಾರ್ಥಿಗಳು ಒಗ್ಗೂಡಿ ರಚಿಸಿದ ‘101 ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಜಿಕ್’ ಎಂಬ ವಿದ್ಯುನ್ಮಾನ ಇ-ಪುಸ್ತಕ ಇತ್ತೀಚೆಗೆ ಲೋಕಾರ್ಪಣೆಗೊಂಡಿತು.

ಬಿಸ್ಲೆರಿ ಕಂಪೆನಿಯ ಎಎಸ್‌ಎಂ ವಿಶಾಲ್ ಶೆಟ್ಟಿ ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

101 ಲೇಖಕರು ರಚಿಸಿದ 101 ವಿಷಯಗಳನ್ನು ಈ ಪಿ.ಡಿ.ಎಫ್. ಪುಸ್ತಕ ಹೊಂದಿವೆ. ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್ ಲಾಜಿಕ್ ಅತ್ಯವಶ್ಯಕವಾಗಿದ್ದು, ಇದನ್ನು ಸರಳ ರೀತಿಯಲ್ಲಿ ಈ ಪುಸ್ತಕದಿಂದ ಕಲಿಯಬಹುದು.

ಕಾರ್ಯಕ್ರಮದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್, ಉಪ ಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರಾದ ವಿಖ್ಯಾತ ಪ್ರಭು, ಕವಿತಾ ಮೊಗೇರ, ಗೌರೀಶ ಭಂಡಾರಿ, ಸಂಹಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News