×
Ad

ಅಸಾರಾಮ್ ಬಾಪು ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗೆ 2,000 ಬೆದರಿಕೆ ಪತ್ರಗಳು!

Update: 2018-04-25 22:02 IST
ಅಜಯ್ ಪಾಲ್ ಲಾಂಬಾ

 ಜೋಧಪುರ, ಎ. 25: ಅಸಾರಾಮ್ ಬಾಪು ಅತ್ಯಾಚಾರ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಲಾಂಬಾ ಅವರಿಗೆ 2000ಕ್ಕೂ ಅಧಿಕ ಬೆದರಿಕೆ ಪತ್ರಗಳು ಹಾಗೂ 100 ದೂರವಾಣಿ ಕರೆಗಳು ಬಂದಿದ್ದವು. ‘‘ಅಸಾರಾಮ್‌ಗೆ ಏನಾದರೂ ಸಂಭವಿಸಿದರೆ ಕುಟುಂಬವನ್ನೇ ಹತ್ಯೆ ಮಾಡಲಾಗುವುದು ಎಂಬ ಬೆದರಿಕೆ ಹಾಗೂ ನಿಂದನೆಯನ್ನು ಪತ್ರಗಳು ಹೊಂದಿದ್ದವು. ನನ್ನ ಫೋನ್ ಯಾವಾಗಲೂ ರಿಂಗ್ ಆಗುತ್ತಿತ್ತು. ಅನಂತರ ನಾನು ಅಪರಿಚಿತ ನಂಬರ್‌ನ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ನಾನು ಉದಯಪುರಕ್ಕೆ ವರ್ಗಾವಣೆಯಾದ ಬಳಿಕ ಪತ್ರಗಳು ಬರುವುದು ನಿಂತಿತು’’ ಎಂದು ಲಾಂಬಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News