ಮತದಾನದಲ್ಲಿ ತಪ್ಪದೆ ಭಾಗವಹಿಸಿ: ಎಸ್ಕೆಎಸ್ಸೆಸ್ಸೆಫ್

Update: 2018-04-26 07:27 GMT

ಮಂಗಳೂರು, ಎ.26: ಮುಂಬರುವ ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಭಾಗವಹಿಸಬೇಕೆಂದು ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಕರೆ ನೀಡಿದೆ.

ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.

ಮತದಾನವು ಪ್ರಜಾಪ್ರಭುತ್ವದ ಬಲಿಷ್ಠ ಆಯುಧವಾಗಿದ್ದು, ಜನಪ್ರತಿನಿಧಿಗಳನ್ನು ಆಯ್ಕೆಮಾಡುವಾಗ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಈ ದೇಶದ ಶ್ರೇಷ್ಠ ಸಂವಿಧಾನ ಹಾಗೂ ಜಾತ್ಯಾತೀತ ತತ್ವದ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಆದ್ದರಿಂದ ಎಲ್ಲರನ್ನೂ ಸಮಾನವಾಗಿ ಕಾಣುವ ಸಮುದಾಯದ ಬೇಡಿಕೆಗೆ ಸ್ಪಂದಿಸುವ ಜಾತ್ಯತೀತ ಪಕ್ಷಗಳನ್ನೇ ಆಯ್ಕೆಮಾಡಿಕೊಳ್ಳಬೇಕು. ಮತದಾನ ದುರುಪಯೋಗವಾಗದಂತೆ ಎಚ್ಚರವಹಿಸಬೇಕು ಗರಿಷ್ಠ ಪ್ರಮಾಣದಲ್ಲಿ ಮತದಾನವಾಗುವಂತೆ ನೋಡಿಕೊಳ್ಳುವುದರ ಜೊತೆಗೆ ಸಮುದಾಯದ ಮತ ವಿಭಜನೆಯಗದಂತೆ ಜಾಗರೂಕರಾಗಬೇಕು ಎಂದು  ಸೂಚಿಸಿದೆ.

ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಶಕ್ಷ ಖಾಸಿಂ ದಾರಿಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಸಭೆಯಲ್ಲಿ ಇಸ್ಹಾಕ್ ಫೈಝಿ ಕಡಬ, ಶಾಫಿ ದಾರಿಮಿ ಅಜ್ಜಾವರ ಸುಳ್ಶ, ಮಜೀದ್ ದಾರಿಮಿ ಕುಂಬ್ರ ಪುತ್ತೂರು, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಶರೀಫ್ ಮೂಸ ಕುದ್ದುಪದವು, ಅಬ್ದುಲ್ ಅಝೀಝ್ ಮಲಿಕ್ ಮೂಡುಬಿದಿರೆ, ಅಶ್ರಫ್ ಕಡಬ, ಅಶ್ರಫ್ ಕೊಳ್ಳೆಜಾಲ್ ಉಪ್ಪಿನಂಗಡಿ, ಶರೀಫ್ ಕಕ್ಕಿಂಜೆ ಬೆಳ್ತಂಗಡಿ ಮುಂತಾದವರು ಭಾಗವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News