ಮಂಜನಾಡಿ: ‘ಅಲ್ ಮದೀನಾ’ದಿಂದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

Update: 2018-04-26 18:10 GMT

ಮಂಗಳೂರು, ಎ.26: ಮಂಜನಾಡಿಯ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ 2019ರ ಪ್ರಾರಂಭದಲ್ಲಿ ರಜತ ಮಹೋತ್ಸವದ ಸಿದ್ಧತೆಯಲ್ಲಿದೆ. ಈ ಪ್ರಯುಕ್ತ 25 ವಿವಿಧ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. 25 ಜೋಡಿ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಇದರಲ್ಲೊಂದಾಗಿದೆ. ಇದಕ್ಕಾಗಿ ಅರ್ಹ ಬಡ ಕುಟುಂಬದಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅಲ್ ಮದೀನದ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2287786, 9008220649 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News