ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುದೀಪ್ ದುರಿಶೆಟ್ಟಿ ದೇಶಕ್ಕೆ ಪ್ರಥಮ

Update: 2018-04-27 15:30 GMT

ಹೊಸದಿಲ್ಲಿ, ಎ.27: ನಾಗರಿಕ ಸೇವಾ ಪರೀಕ್ಷೆ 2017 ಇದರ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ಶುಕ್ರವಾರ ಬಿಡುಗಡೆಗೊಳಿಸಿದ್ದು, ಹೈದರಾಬಾದ್ ನ ಅನುದೀಪ್ ದುರಿಶೆಟ್ಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಯುಪಿಎಸ್ಸಿಯ ಅಧಿಕೃತ ವೆಬ್ ಸೈಟ್ upsc.gov.in ಮೂಲಕ ಕಳೆದ ವರ್ಷ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

ಕೇಂದ್ರ ಸಾರ್ವಜನಿಕ ಸೇವಾ ಆಯೋಗದಿಂದ 2017ರ ಅಕ್ಟೋಬರ್-ನವೆಂಬರ್ ನಲ್ಲಿ ನಡೆದ ಲಿಖಿತ ಹಾಗು 2018ರ ಫೆಬ್ರವರಿ-ಎಪ್ರಿಲ್ ನಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಆಧಾರದಲ್ಲಿ ಭಾರತೀಯ ಆಡಳಿತಾತ್ಮಕ ಸೇವೆಗೆ 990 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. 2017 ಅಕ್ಟೋಬರ್ 28ರಂದು ಯುಪಿಎಸ್ಸಿ ಪ್ರಮುಖ ಪರೀಕ್ಷೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News