×
Ad

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅಪರಾಧಿ ನಳಿನಿ ಮನವಿ ತಿರಸ್ಕೃತ

Update: 2018-04-27 23:41 IST

ಚೆನ್ನೈ, ಎ. 27: ಅವಧಿಪೂರ್ವ ಬಿಡುಗಡೆಗೆ ಕೋರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಸಲ್ಲಿಸಿರುವ ಮನವಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ತಳ್ಳಿ ಹಾಕಿದೆ.

ನಳಿನಿ ಸಲ್ಲಿಸಿರುವ ಮನವಿ ಬಗ್ಗೆ ಶುಕ್ರವಾರ ತೀರ್ಪು ಘೋಷಿಸಲಾಗುವುದು ಎಂದು ನ್ಯಾಯಾಲಯ ಈ ವಾರದ ಆರಂಭದಲ್ಲಿ ಹೇಳಿತ್ತು. 1994ರ ರಾಜ್ಯ ಸರಕಾರದ ಯೋಜನೆ ಅಡಿ ಅವಧಿ ಪೂರ್ವ ಬಿಡುಗಡೆಗೆ ಕೋರಿ ನಳಿನಿ ಶ್ರೀಹರನ್ ಸಲ್ಲಿಸಿದ್ದ ಮನವಿಯನ್ನು ಏಕ ಸದಸ್ಯ ಪೀಠ ತಿರಸ್ಕರಿಸಿತ್ತು. ಇದನ್ನು ನಳಿನಿ ಶ್ರೀಹರನ್ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಕೆ. ಶಶಿಧರನ್ ಹಾಗೂ ಆರ್ ಸುಬ್ರಹ್ಮಣಿಯನ್ ತೀರ್ಪನ್ನು ಎಪ್ರಿಲ್ 24ರಂದು ಕಾಯ್ದಿರಿಸಿದ್ದರು.

ಸರ್ವೋಚ್ಚ ನ್ಯಾಯಾಲಯ ಮುಂದೆ ಇಂತದ್ದೇ ಪ್ರಕರಣಗಳು ಬಾಕಿ ಇರುವುದರಿಂದ ನಳಿನಿ ಶ್ರೀಹರನ್ ಅವರ ಮನವಿಗೆ ಅವಕಾಶ ನೀಡಬಾರದು ಎಂದು ತಮಿಳುನಾಡು ಸರಕಾರ 2017 ನವೆಂಬರ್‌ನಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ರಾಜ್ಯ ಗೃಹ ಇಲಾಖೆಯ ರಾಜೀವ್ ಉಪ ಕಾರ್ಯದರ್ಶಿ ನಳಿನಿ ಅರ್ಜಿ ವಿರುದ್ಧ ಪ್ರತಿ ಅರ್ಜಿ ಅಫಿದಾವಿತ್ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News