ಉತ್ತರ ಅಮೆರಿಕದ ಬಿಡ್ ವಿರೋಧಿಸಬೇಡಿ: ಟ್ರಂಪ್ ಎಚ್ಚರಿಕೆ

Update: 2018-04-27 18:29 GMT

ವಾಷಿಂಗ್ಟನ್, ಎ.27: 2026ರ ವಿಶ್ವಕಪ್ ಫುಟ್‌ಬಾಲ್ ಕ್ರಿಕೆಟ್ ಟೂರ್ನಿಯ ಆತಿಥೇಯತ್ವವನ್ನು ಉತ್ತರ ಅಮೆರಿಕದ ಕೆನಡಾ ಮತ್ತು ಮೆಕ್ಸಿಕೊ ವಹಿಸಬೇಕೆಂದು ಬಿಡ್ ಸಲ್ಲಿಸಿರುವ ಅಮೆರಿಕ , ಇದನ್ನು ವಿರೋಧಿಸಬೇಡಿ ಎಂದು ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. 2026ರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಆತಿಥೇಯತ್ವಕ್ಕೆ ಕೆನಡಾ ಮತ್ತು ಮೆಕ್ಸಿಕೋ ಪರವಾಗಿ ಬಿಡ್ ಸಲ್ಲಿಸಿದ್ದೇವೆ. ಆದರೆ ಕೆಲವು ರಾಷ್ಟ್ರಗಳು ಇದಕ್ಕೆ ವಿರೋಧ ಸೂಚಿಸಿವೆ. ಅಮೆರಿಕದಿಂದ ಸಹಾಯ, ನೆರವು ಪಡೆಯುತ್ತಿರುವ ರಾಷ್ಟ್ರಗಳು ಈ ರೀತಿ ಮಾಡುತ್ತಿರುವುದು ನಾಚಿಕೆಗೇಡು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

(ವಿಶ್ವಸಂಸ್ಥೆ ಸಹಿತ)ಅವರು ನಮ್ಮನ್ನು ಬೆಂಬಲಿಸದಿದ್ದರೆ ನಾವ್ಯಾಕೆ ಅವರಿಗೆ ನೆರವಾಗಬೇಕು ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಉತ್ತರ ಅಮೆರಿಕದ ಹೊರತಾಗಿ, ಬಿಡ್ ಸಲ್ಲಿಸಿರುವ ಏಕೈಕ ರಾಷ್ಟ್ರವೆಂದರೆ ಮೊರಕ್ಕೊ. ಮೊರಕ್ಕೋಗೆ ಫ್ರಾನ್ಸ್‌ನ ಬೆಂಬಲವಿದೆ ಎಂದು ಫ್ರೆಂಚ್ ಫುಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ನೋಯೆಲ್ ಗ್ರೇಟ್ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಮ್ಮೆ ಮಾತ್ರ (2010)ರಲ್ಲಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಆಯೋಜಿಸಲಾಗಿದ್ದು, ಉಳಿದಂತೆ ಅವರ ಬೇಡಿಕೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ಮೊರಕ್ಕೋದ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಆಫ್ರಿಕನ್ ಫುಟ್‌ಬಾಲ್ ಸಂಘಟನೆಯ ಅಧ್ಯಕ್ಷ ಅಹ್ಮದ್ ವಿಶ್ವದ ರಾಷ್ಟ್ರಗಳನ್ನು ವಿನಂತಿಸಿದ್ದಾರೆ. ಈ ಬಾರಿ ನಮಗೆ ಮತ ನೀಡಿದರೆ ಮುಂದಿನ ಬಾರಿ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದವರು ಯುರೋಪ್‌ನ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮೊರಕ್ಕೋ ಆಫ್ರಿಕಾ ದೇಶಗಳ ಬೆಂಬಲದ ನಿರೀಕ್ಷೆಯಲ್ಲಿದ್ದರೆ ದಕ್ಷಿಣ ಅಮೆರಿಕ ಫುಟ್‌ಬಾಲ್ ಸಂಘಟನೆಯ 10 ದೇಶಗಳು ಅಮೆರಿಕದ ಬಿಡ್ ಬೆಂಬಲಿಸಲು ಅವಿರೋಧವಾಗಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಅಮೆರಿಕದಲ್ಲಿ ಫುಟ್‌ಬಾಲ್ ಟೂರ್ನಿ ನಡೆಸಲು ಮೂಲಭೂತ ಸೌಕರ್ಯ ಉತ್ತಮವಾಗಿರುವ ಕಾರಣ ಸಹಜವಾಗಿಯೇ ಅಮೆರಿಕದ ಬಿಡ್ ಯಶಸ್ವಿಯಾಗುವ ಸಾಧ್ಯತೆ ಅಧಿಕ ಎನ್ನಲಾಗಿದೆ. ಆದರೆ ವಲಸಿಗರ ವಿಷಯ ಸೇರಿದಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಹಲವು ಹೇಳಿಕೆಗಳು ಅಮೆರಿಕದ ಬಿಡ್ ವಿರುದ್ಧ ನಿಲುವು ತಳೆಯಲು ಹಲವು ರಾಷ್ಟ್ರಗಳಿಗೆ ಒಂದು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ವಿಶ್ವ ಫುಟ್‌ಬಾಲ್ ಕ್ರೀಡೆಯ ಆಡಳಿತ ಸಂಸ್ಥೆಯಾಗಿರುವ ಫಿಫಾ ಮಾಸ್ಕೋದಲ್ಲಿ ಜೂನ್ 13ರಂದು ಬಿಡ್ ವಿಜೇತ ರಾಷ್ಟ್ರದ ಹೆಸರನ್ನು ಘೋಷಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News