ಸ್ಫೋಟಗೊಳ್ಳದ ಕ್ಷಿಪಣಿಯನ್ನು ಸ್ಫೋಟಿಸಿದ ಮಕ್ಕಳು; 3 ಸಾವು

Update: 2018-04-29 16:25 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಎ. 29: ಅಫ್ಘಾನಿಸ್ತಾನದ ಜನವಾಸ್ತವ್ಯ ಪ್ರದೇಶವೊಂದರಲ್ಲಿ ಸ್ಫೋಟಗೊಳ್ಳದೆ ಉಳಿದಿರುವ ಕ್ಷಿಪಣಿಯೊಂದನ್ನು ಮಕ್ಕಳ ಗುಂಪೊಂದು ರವಿವಾರ ಸ್ಫೋಟಿಸಿದಾಗ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಹಾಗೂ 7 ಮಕ್ಕಳು ಗಾಯಗೊಂಡಿದ್ದಾರೆ.

ಈ ಕ್ಷಿಪಣಿಯನ್ನು ಭಯೋತ್ಪಾದಕರು ಶನಿವಾರ ರಾತ್ರಿ ಉಡಾಯಿಸಿದ್ದರು. ಆದರೆ, ಅದು ಸ್ಫೋಟಗೊಂಡಿರಲಿಲ್ಲ ಎಂದು ನಂಗರ್‌ಹಾರ್ ಪ್ರಾಂತದ ಗವರ್ನರ್‌ರ ವಕ್ತಾರರೊಬ್ಬರು ತಿಳಿಸಿದರು.

ನಂಗರ್‌ಹಾರ್ ಪ್ರಾಂತದಲ್ಲಿ ತಾಲಿಬಾನ್ ಮತ್ತು ಐಸಿಸ್ ಉಗ್ರ ಸಂಘಟನೆಗಳು ಸಕ್ರಿಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News