ನೇಪಾಳ: ಭಾರತ ನೆರವಿನ ವಿದ್ಯುತ್ ಯೋಜನೆ ಕಚೇರಿ ಸ್ಫೋಟ

Update: 2018-04-29 16:30 GMT
ಸಾಂದರ್ಭಿಕ ಚಿತ್ರ

ಕಠ್ಮಂಡು, ಎ. 29: ಪೂರ್ವ ನೇಪಾಳದಲ್ಲಿ ಭಾರತದ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗಿರುವ ವಿದ್ಯುತ್ ಯೋಜನೆಯ ಕಚೇರಿಯ ಸಮೀಪ ಬಾಂಬೊಂದು ಸ್ಫೋಟಗೊಂಡಿದೆ.

ಈ ಯೋಜನೆಯ ಗುದ್ದಲಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಮೇ 11ರಂದು ನೆರವೇರಿಸುವವರಿದ್ದರು.

‘ಅರುಣ್ ಜಲವಿದ್ಯುತ್ ಯೋಜನೆ’ಯ ಟುಮ್‌ಗ್ಲಿಂಗ್ಟರ್‌ನಲ್ಲಿರುವ ಕಚೇರಿಯನ್ನು ಗುರಿಯಾಗಿಸಿ ಶನಿವಾರ ಮಧ್ಯರಾತ್ರಿ ಬಾಂಬ್ ಸ್ಫೋಟಿಸಲಾಗಿದೆ ಎಂದು ಸಂಖುವಸಭ ಜಿಲ್ಲಾಧಿಕಾರಿ ಶಿವರಾಜ್ ಜೋಶಿ ತಿಳಿಸಿದರು.

ಈ ಯೋಜನೆಯನ್ನು ಭಾರತ ಸರಕಾರದ ಒಡೆತನದ ಸಟ್ಲಜ್ ಜಲ ವಿದ್ಯುತ್ ನಿಗಮ (ಎಸ್‌ಜೆವಿಎನ್)ದ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗಿದೆ.

ಸ್ಫೋಟದಿಂದಾಗಿ ಕಚೇರಿಯ ಗೋಡೆಗಳಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದರು.

ಯಾರೂ ಗಾಯಗೊಂಡಿಲ್ಲ ಹಾಗೂ ಇದರ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News