ಕುವೈತ್‌ನಲ್ಲಿ ಕೆಲಸ ನಿಷಿದ್ಧ ಖಾಯಂಗೊಳಿಸಿದ ಫಿಲಿಪ್ಪೀನ್ಸ್
Update: 2018-04-29 22:05 IST
ಮನಿಲಾ (ಫಿಲಿಪ್ಪೀನ್ಸ್), ಎ. 29: ಫಿಲಿಪ್ಪೀನ್ಸ್ ಪ್ರಜೆಗಳು ಕುವೈತ್‌ನಲ್ಲಿ ಕೆಲಸ ಮಾಡುವುದರ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಖಾಯಂಗೊಳಿಸಲಾಗಿದೆ ಎಂದು ಆ ದೇಶದ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ರವಿವಾರ ಹೇಳಿದ್ದಾರೆ.
ಕುವೈತ್‌ನ ಮನೆಯೊಂದರ ಫ್ರೀಝರ್‌ನಲ್ಲಿ ಫಿಲಿಪ್ಪೀನ್ಸ್ ಮನೆಗೆಲಸದಾಕೆಯ ಶವ ಪತ್ತೆಯಾದ ಬಳಿಕ, ಕುವೈತ್‌ಗೆ ತನ್ನ ದೇಶದ ಪ್ರಜೆಗಳು ಹೋಗುವುದನ್ನು ಫೆಬ್ರವರಿಯಲ್ಲಿ ಡುಟರ್ಟ್ ನಿಷೇಧಿಸಿದ್ದರು.
ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಹಲವು ಫಿಲಿಪ್ಪೀನ್ಸ್ ಮಹಿಳೆಯರು ದೇಶ ತೊರೆಯಲು ಸಹಾಯ ಮಾಡಿದ್ದಾರೆ ಎಂಬ ಆರೋಪದಲ್ಲಿ ಫಿಲಿಪ್ಪೀನ್ಸ್ ರಾಯಭಾರಿಗೆ ದೇಶ ತೊರೆಯುವಂತೆ ಕಳೆದ ವಾರ ಕುವೈತ್ ಸೂಚನೆ ನೀಡಿದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದೆ.