×
Ad

ಮುಂಬೈ ದಾಳಿ ಪ್ರಕರಣದ ವಕೀಲರನ್ನು ಕೈಬಿಟ್ಟ ಪಾಕ್

Update: 2018-04-29 22:23 IST

ಇಸ್ಲಾಮಾಬಾದ್, ಎ. 29: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಧಾನ ಸರಕಾರಿ ವಕೀಲರನ್ನು ಪಾಕಿಸ್ತಾನದ ಆಂತರಿಕ ಸಚಿವಾಲಯವು ಕೈಬಿಟ್ಟಿದೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದರು.

ಸರಕಾರದ ನಿಲುವಿನಂತೆ ನಡೆಯದಿರುವುದಕ್ಕಾಗಿ ವಿಶೇಷ ಪ್ರಾಸಿಕ್ಯೂಟರ್ ಚೌಧರಿ ಅಝರ್‌ರನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.

ಮಹತ್ವದ ಪ್ರಕರಣದಲ್ಲಿ ಅವರು 2009ರಿಂದಲೂ ಪಾಕಿಸ್ತಾನ ಸರಕಾರದ ಪರವಾಗಿ ವಾದಿಸಿದ್ದರು.

2008 ನವೆಂಬರ್‌ನಲ್ಲಿ ಲಷ್ಕರ್ ಎ ತೊಯ್ಬಾ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಹತ್ಯಾಕಾಂಡದಲ್ಲಿ 166 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News