×
Ad

ನಾಸಾದ ಫೋಟೊ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಕೇಂದ್ರ ಸಚಿವ ಗೋಯಲ್

Update: 2018-04-29 23:30 IST

ಹೊಸದಿಲ್ಲಿ, ಎ.29: ಪ್ರಧಾನಿ ಮೋದಿಯವರ ನಿರ್ಣಾಯಕ ನಾಯಕತ್ವದಡಿ ಭಾರತವು ಕಡೆಗೂ ನಿಗದಿತ ಗಡುವಿಗೂ ಮೊದಲೇ ಎಲ್ಲಾ ಗ್ರಾಮಗಳನ್ನೂ ವಿದ್ಯುದೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ . ಕೇಂದ್ರ ಸರಕಾರ ಹಲವು ಭಾರತೀಯರ ಬಾಳಿನಲ್ಲಿದ್ದ ಕತ್ತಲೆಯನ್ನು ದೂರಗೊಳಿಸುವ ಮೂಲಕ ನೂತನ, ಬಲಿಷ್ಟ ಭಾರತ ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದರು . ಆದರೆ ಇದರೊಂದಿಗೆ ಅವರು ಟ್ವೀಟ್ ಮಾಡಿರುವ ಫೋಟೋಗಳು ಈಗ ಟೀಕೆಗೆ ಗ್ರಾಸವಾಗಿವೆ. 

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಬಿಡುಗಡೆಗೊಳಿಸಿದ ಫೋಟೋವನ್ನು ಗೋಯಲ್ ಟ್ವೀಟ್ ಮಾಡಿದ್ದರು. ಆದರೆ ಶನಿವಾರ ಮಣಿಪುರದ ಲೀಸಂಗ್ ಗ್ರಾಮದಲ್ಲಿ ನಡೆದ ವಿದ್ಯುದೀಕರಣ ಪ್ರಕ್ರಿಯೆಯ ಮೊದಲು ಗ್ರಾಮದ ಸ್ಥಿತಿ ಹೇಗಿತ್ತು ಮತ್ತು ಬಳಿಕ ಹೇಗಾಗಿದೆ ಎಂಬ ಚಿತ್ರ ಅದಾಗಿರಲಿಲ್ಲ. ಈ ಚಿತ್ರವು ಭಾರತದಲ್ಲಿ ನಗರಗಳು ಹೇಗೆ ಅಭಿವೃದ್ಧಿಗೊಂಡಿವೆ ಮತ್ತು ಜನಸಂಖ್ಯೆ ಯಾವ ರೀತಿ ಹರಡಿಕೊಂಡಿದೆ ಎಂಬುದನ್ನು ವಿವರಿಸುವ ಚಿತ್ರವಾಗಿತ್ತು. ಮೊದಲ ಚಿತ್ರವನ್ನು ನಾಸ 2012ರಲ್ಲಿ ಎರಡನೇ ಚಿತ್ರವನ್ನು 2016ರಲ್ಲಿ ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News