ತೊಕ್ಕೊಟ್ಟು: ಖೈರಿಯಾ ಶೆಲ್ಟರ್ ಅನಾಥ-ನಿರ್ಗತಿಕ ಪಿಯು ವಿದ್ಯಾರ್ಥಿನಿಯರಿಂದ ಉತ್ತಮ ಫಲಿತಾಂಶ

Update: 2018-04-30 12:33 GMT

ತೊಕ್ಕೊಟ್ಟು, ಎ. 30: ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಖೈರಿಯಾ ಶೆಲ್ಟರ್ ಇದರ ಅನಾಥ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಸಂಸ್ಥೆಯಲ್ಲಿರುವ 10 ಮಂದಿ ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಹಿರಾ ಮಹಿಳಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಸಾರಮ್ಮ ಸಾಜಿದ (467) ಮತ್ತು ಹಝ್ರತ್ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸ್ವಾಲಿಹ ಶಹನಾಝ್ (466), ಆಯಿಷ ತಶ್ರೀಫಾ (454) ಅಲಿಮತ್ ಶಿಫಾ (426) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News