ಪಶ್ಚಿಮ ಬಂಗಾಳದ ಯುವ ಈಜುಗಾರ್ತಿ ಆತ್ಮಹತ್ಯೆ
Update: 2018-05-01 18:11 IST
ಕೋಲ್ಕತಾ, ಮೇ 1: ಅಂತರ್ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಪಶ್ಚಿಮ ಬಂಗಾಳದ ಬಾಂಡೆಲ್ ನಿವಾಸಿ ಮೌಪ್ರಿಯಾ ಮಿತ್ರಾ (16)ಸೋಮವಾರ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮೌಪ್ರಿಯಾ ಪ್ರೇಮ ವೈಫಲ್ಯದಿಂದಾಗಿ ಮಾನಸಿಕವಾಗಿ ನೊಂದಿದ್ದು,ಈ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲಂಬೊದಲ್ಲಿ 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ (ಎಸ್ಎಎಸಿ) ಚಿನ್ನ ಮತ್ತು ಬೆಳ್ಳಿ ಪದಕವನ್ನು ಮಿತ್ರಾ ಗೆದ್ದುಕೊಂಡಿದ್ದರು.
ತನ್ನ ವೃತ್ತಿಜೀವನವನ್ನು ಜಿಮ್ನಾಸ್ಟಿಕ್ಸ್ ಮೂಲಕ ಆರಂಭಿಸಿದ್ದ ಮೌಪ್ರಿಯಾ ಅವರಿಗೆ ಅಪಘಾತವೊಂದರಲ್ಲಿ ಕಾಲಿಗೆ ಗಾಯವಾಗಿತ್ತು. ಆ ಬಳಿಕ ಅವರು ಈಜು ಕಡೆಗೆ ಗಮನ ಹರಿಸಿದ್ದರು. ಈಜಿನಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಮೌಪ್ರಿಯಾ ಡೈವಿಂಗ್ ನಲ್ಲಿ ಯಶಸ್ಸು ಸಾಧಿಸಿದ್ದರು.