×
Ad

ಮೋದಿಗೆ ತಿರುಗುಬಾಣವಾದ ಅಚ್ಛೇ ಕಪ್ಡೇ...

Update: 2018-05-01 23:45 IST

ಹೊಸದಿಲ್ಲಿ, ಮೇ 1: ಕಾಂಗ್ರೆಸ್ ಪಕ್ಷವನ್ನು ಗುರಿ ಮಾಡಿ ಪ್ರಧಾನಿ ನರೇಂದ್ರ ಮೋದಿ ನೀಡಿದ 'ಅಚ್ಛೇ ಕಪ್ಡೇ' ಹೇಳಿಕೆ ಅವರಿಗೇ ತಿರುಗುಬಾಣವಾಗಿದ್ದು, ಕಾಂಗ್ರೆಸ್ ಅಂತಿಮವಾಗಿ ಗೆಲುವಿನ ಕೇಕೆ ಹಾಕಿದೆ.

ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಪ್ರಧಾನಿ ಮೋದಿ, "ನಮಗೆ ಉಡಲು ಒಳ್ಳೆಯ ಬಟ್ಟೆಯೂ ಇರಲಿಲ್ಲ (ಹಮ್ ತೋ ಅಚ್ಛೇ ಕಪ್ಡೇ ಭೀ ನಹಿ ಪೆಹೆನ್ ಸಕ್ತೇ) ಎಂದು ಹೇಳಿದ್ದರು. ಕಾಂಗ್ರೆಸ್ ಇದನ್ನೇ ಮೋದಿ ವಿರುದ್ಧದ ಅಸ್ತ್ರವಾಗಿ ಪ್ರಯೋಗಿಸಿದೆ.

ಕಾಂಗ್ರೆಸ್‌ನ ಟ್ವಿಟ್ಟರ್ ತಂಡ ತಕ್ಷಣ ಪ್ರತಿಕ್ರಿಯಿಸಿ ಮೋದಿ ಭಾಷಣದ ವೀಡಿಯೊ ತುಣುಕು ಮತ್ತು ಮೋದಿ ಅತ್ಯಂತ ದುಬಾರಿ ವಸ್ತ್ರ ಧರಿಸಿರುವ ಸ್ಲೈಡ್‌ಶೋ ಟ್ವೀಟ್ ಮಾಡಿದೆ. ಪ್ರಧಾನಿ ಕಾಲೆಳೆಯುವುದನ್ನು ಇಷ್ಟಕ್ಕೇ ನಿಲ್ಲಿಸದೇ ಅದಕ್ಕೆ ರಾಜನ ಹೊಸ ಉಡುಗೆ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾಗಿದೆ.

ರಾಜನ ಹೊಸ ಉಡುಗೆ ಎನ್ನುವುದು ಖ್ಯಾತ ಸಣ್ಣಕಥೆಯಾಗಿದ್ದು, ಚಿನ್ನದ ಸೂಟ್ ಭರವಸೆ ನೀಡಿದ ಇಬ್ಬರು ನಯವಂಚಕರು ರಾಜನನ್ನು ವಂಚಿಸುವ ತಿರುಳು ಹೊಂದಿದೆ. ಇದನ್ನೇ ಪ್ರಧಾನಿ ದುಬಾರಿ ಸೂಟ್ ಸ್ಲೈಡ್‌ಶೋಗೆ ಶೀರ್ಷಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News