ಚೊಕ್ಕಬೆಟ್ಟು: ಕಥುವಾ, ಉನ್ನಾವೊ ಪ್ರಕರಣ ವಿರುದ್ಧ ಎಸ್ಕೆಎಸ್ಸೆಸ್ಸೆಫ್-ಎಸ್.ವೈ.ಎಸ್ ವತಿಯಿಂದ ಪ್ರತಿಭಟನೆ

Update: 2018-05-02 06:45 GMT

ಚೊಕ್ಕಬೆಟ್ಟು, ಮೇ 2: ಕಥುವಾದಲ್ಲಿ ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಭೀಕರ ಕೊಲೆ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರವನ್ನು ಖಂಡಿಸಿ ಎಸ್ಕೆಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ಚೊಕ್ಕಬೆಟ್ಟು ಶಾಖೆಯ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಚೊಕ್ಕಬೆಟ್ಟು ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮೌಲಾನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಕಥುವಾ ಮತ್ತು  ಉನ್ನಾವೊದಲ್ಲಿ ನಡೆದ ಅಮಾನವೀಯ ಘಟನೆ ಖಂಡನೀಯ. ದೇಶದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಾಖೆಯ ಅಧ್ಯಕ್ಷ ಮುಹಮ್ಮದ್, ಮಾಜಿ ಅಧ್ಯಕ್ಷ ನೂರ್ ಮುಹಮ್ಮದ್, ಕಾರ್ಯದರ್ಶಿ ಇಬ್ರಾಹೀಂ, ಕಾಂಗ್ರೆಸ್ ವಲಯಾಧ್ಯಕ್ಷ ಕಮಾಲ್ ಹುಸೈನ್, ಅಬ್ದುಲ್ಲ ಬಾವ, ರಶೀದ್, ಇಂತಿಯಾಝ್ ಹಾಗೂ ಇನ್ನಿತರ ಊರಿನ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News