ಶೊಪಿಯಾನ್ ನಲ್ಲಿ ಶಾಲಾ ಬಸ್ ಮೇಲೆ ಕಲ್ಲು ತೂರಾಟ: ಇಬ್ಬರು ಮಕ್ಕಳಿಗೆ ಗಾಯ
Update: 2018-05-02 23:02 IST
ಶ್ರೀನಗರ, ಮೇ 2: ಇಲ್ಲಿನ ಶೊಪಿಯಾನ್ ನಲ್ಲಿ ಶಾಲಾ ಬಸ್ ವೊಂದರ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ.
ಬಸ್ ನಲ್ಲಿ 50 ಮಕ್ಕಳಿದ್ದರು ಎನ್ನಲಾಗಿದೆ. ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಪ್ರವಾಸಿ ವಾಹನದ ಮೇಲೆ ನಡೆದ ಕಲ್ಲುತೂರಾಟದಲ್ಲಿ ಮೂವರು ಪ್ರವಾಸಿಗರು ಗಾಯಗೊಂಡಿದ್ದಾರೆ. ಇದೇ ಸಂದರ್ಭ ಪಿಡಿಪಿ ಶಾಸಕ ಮುಹಮ್ಮದ್ ಯೂಸುಫ್ ಭಟ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.
ರೈನ್ ಬೋ ಇಂಟರ್ ನ್ಯಾಶನಲ್ ಎಜುಕೇಶನಲ್ ಇನ್ ಸ್ಟಿಟ್ಯೂಟ್ ನ ಶಾಲಾ ಬಸ್ ಮೇಲೆ ಝವೂರಾ ಸಮೀಪ ಕಲ್ಲುತೂರಾಟ ನಡೆದಿತ್ತು. ಕಲ್ಲು ಮಕ್ಕಳ ತಲೆಗೆ ಬಡಿದಿತ್ತು ಎನ್ನಲಾಗಿದೆ.
ಈ ದಾಳಿಯಿಂದ 6 ವರ್ಷದ ವಿದ್ಯಾರ್ಥಿ ರಿಹಾನ್ ಗೋರ್ಸಾಯಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೋರ್ವ ವಿದ್ಯಾರ್ಥಿಯ ತಲೆಗೆ ಗಾಯಗಳಾಗಿವೆ.