×
Ad

ಭಾರತದ ಮಹಿಳಾ ಹಾಕಿಗೆ ಸುನೀತಾ ಲಕ್ರಾ ನಾಯಕಿ

Update: 2018-05-02 23:59 IST
ಸುನೀತಾ ಲಕ್ರಾ

ಹೊಸದಿಲ್ಲಿ, ಮೇ 2: ಅನುಭವಿ ಡಿಫೆಂಡರ್ ಸುನೀತಾ ಲಕ್ರಾ ಅವರು ಕೊರಿಯಾದಲ್ಲಿ ಮೇ 13ರಿಂದ ಆರಂಭ ವಾಗಲಿರುವ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ಸುನೀತಾ ನಾಯಕತ್ವದ 18 ಮಂದಿ ಆಟಗಾರ್ತಿಯರ ಮಹಿಳಾ ಹಾಕಿ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಗೋಲ್ ಕೀಪರ್ ಸವಿತಾ ತಂಡದ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಂಡದ ನಾಯಕ ರಾಣಿ ರಾಂಪಾಲ್‌ಗೆ ವಿಶ್ರಾಂತಿ ನೀಡಲಾಗಿದೆ.

ಹಾಲಿ ಚಾಂಪಿಯನ್ ಭಾರತ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ. ಕಳೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. 12 ವರ್ಷಗಳ ಬಳಿಕ ಕಾಮನ್‌ವೆಲ್ತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿತ್ತು.

ಭಾರತದ ಮಹಿಳಾ ಹಾಕಿ ತಂಡ 2016ರಲ್ಲಿ ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಚೀನಾವನ್ನು ಮಣಿಸಿ ಟ್ರೋಫಿ ಬಾಚಿಕೊಂಡಿತ್ತು. ಭಾರತದ ವನಿತೆಯರು 2017ರಲ್ಲಿ ಏಶ್ಯಾಕಪ್‌ನಲ್ಲಿ ಚೀನಾಕ್ಕೆ ಸೋಲುಣಿಸಿದ್ದರು.

ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಭಾರತ ಮೇ 13ರಂದು ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

   ಹಾಲೆಂಡ್‌ನ ಕೋಚ್ ಶೋರ್ಡ್ ಮ್ಯಾರಿಜ್ ಕೋಚ್ ಆಗಿ ತಂಡದ ಜವಾಬ್ದಾರಿ ವಹಿಸಿಕೊಂಡ ಬಳಿಕ ಅವರಿಗೆ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಮೊದಲ ಸವಾಲು. ಅವರು ಏಳು ತಿಂಗಳು ಪುರುಷರ ಹಾಕಿ ತಂಡದ ಕೋಚ್ ಆಗಿದ್ದರು. ಮಹಿಳಾ ತಂಡದ ಕೋಚ್ ಆಗಿದ್ದ ಹರೇಂದ್ರ ಸಿಂಗ್ ಅವರನ್ನು ಹಾಕಿ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಸಿದೆ. ಶೋರ್ಡ್ ಮ್ಯಾರಿಜ್ ಅವರನ್ನು ತಂಡದ ನೂತನ ಕೋಚ್ ಆಗಿ ನೇಮಕಗೊಳಿಸಿದೆ.

ಭಾರತದ ಮಹಿಳಾ ಹಾಕಿ ತಂಡ

►ಗೋಲ್ ಕೀಪರ್ಸ್ : ಸವಿತಾ, ಸ್ವಾತಿ,

►ಡಿಫೆಂಡರ್ಸ್: ದೀಪಿಕಾ, ಸುನೀತಾ ಲಕ್ರಾ(ನಾಯಕಿ), ದೀಪ್ ಗ್ರೇಸಿ ಎಕ್ಕಾ, ಗುರ್ಜಿತ್ ಕೌರ್, ಸುಮನ್ ದೇವಿ ಥೌಡಮ್

►ಮಿಡ್‌ಫೀಲ್ಡರ್ಸ್‌:ಮೋನಿಕಾ, ನಮಿತಾ, ಟೊಪ್ಪೊ, ನಿಕ್ಕಿ ಪ್ರಧಾನ್, ನೇಹಾ ಗೋಯಲ್, ಲಿಲ್ಮಾ ಮಿಂಝ್, ನವ್‌ಜೋತ್ ಕೌರ್, ಉದಿತಾ.

►ಫಾರ್ವರ್ಡ್ಸ್: ವಂದನಾ ಕಟಾರಿಯಾ, ಲಾಲ್ರೆಂಸಿಯಾಮಿ, ನವ್‌ನೀತ್ ಕೌರ್, ಅನುಪಾ ಬಾರ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News