×
Ad

ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾದ ಬಸ್: 27 ಪ್ರಯಾಣಿಕರ ಸಜೀವ ದಹನ

Update: 2018-05-03 19:25 IST

ಪಾಟ್ನಾ, ಮೇ 3: ಮುಝಫ್ಫರ್ ನಗರದಿಂದ ದಿಲ್ಲಿಗೆ ಸಾಗುತ್ತಿದ್ದ ಬಸ್ ಒಂದು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 27 ಪ್ರಯಾಣಿಕರು ಜೀವಂತದಹಿಸಿರುವ ಘಟನೆ ಬಿಹಾರದ ಮೊತಿಹಾರಿಯಲ್ಲಿ ನಡೆದಿದೆ.

27 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಗ್ನಿ ದುರಂತಕ್ಕೀಡಾದ ಬಸ್ ನಿಂದ ನಾಲ್ವರು ಮಾತ್ರ ಪಾರಾಗಿ ಬಂದಿದ್ದಾರೆ ಎಂದು ಕೊತ್ವಾ ಪೊಲೀಸ್ ಠಾಣೆಯ ಮುಖ್ಯಸ್ಥ ವಿಜಯ್ ಸಿನ್ಹಾ ತಿಳಿಸಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನವೊಂದಕ್ಕೆ ನಡೆಯಲಿದ್ದ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದಾಗ ಈ ಅಪಘಾತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.  

“ರಸ್ತೆಯಿಂದ ಹೊರಗೆಸೆಯಲ್ಪಟ್ಟ ಬಸ್ ಪಲ್ಟಿಯಾಯಿತು. ಸ್ಥಳದಲ್ಲಿದ್ದವರು ಬಸ್ ನಲ್ಲಿದ್ದವರನ್ನು ರಕ್ಷಿಸಲು ಧಾವಿಸುವ ಮೊದಲೇ ಬಸ್ ಗೆ ಬೆಂಕಿ ಹೊತ್ತಿಕೊಂಡಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News