ವಾರ್ನರ್ ಸ್ಥಾನ ತುಂಬುವುದು ಕಷ್ಟಕರ: ವಿಲಿಯಮ್ಸನ್
Update: 2018-05-06 23:53 IST
ಹೈದರಾಬಾದ್, ಮೇ 6: ‘‘ಆಸ್ಟ್ರೇಲಿಯದ ಡೇವಿಡ್ ವಾರ್ನರ್‌ರಿಂದ ತೆರವಾದ ಸ್ಥಾನವನ್ನು ತುಂಬುವುದು ಅಸಾಧ್ಯ’’ಎಂದು 11ನೇ ಆವೃತ್ತಿಯ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
‘‘ಡೇವಿಡ್ ವಾರ್ನರ್‌ರಿಂದ ತೆರವಾದ ಸ್ಥಾನ ತುಂಬುವುದು ತುಂಬಾ ಕಷ್ಟಕರ. ಅವರು ಕಳೆದ ಕೆಲವು ವರ್ಷಗಳಿಂದ ವಿಶ್ವದ ಹಾಗೂ ಹೈದರಾಬಾದ್ ಫ್ರಾಂಚೈಸಿಯ ಓರ್ವ ಶ್ರೇಷ್ಠ ಟ್ವೆಂಟಿ-20 ಬ್ಯಾಟ್ಸ್‌ಮನ್ ಆಗಿದ್ದರು’’ ಎಂದು ವಿಲಿಯಮ್ಸನ್ ಹೇಳಿದ್ದಾರೆ.
ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಟೆಸ್ಟ್ ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ವಾರ್ನರ್‌ಗೆ ಕ್ರಿಕೆಟ್ ಆಸ್ಟ್ರೇಲಿಯ ಒಂದು ವರ್ಷ ನಿಷೇಧ ಹೇರಿದೆ. ಸನ್‌ರೈಸರ್ಸ್ ತಂಡ ವಾರ್ನರ್ ಅನುಪಸ್ಥಿತಿಯಲ್ಲೂ ವೈಫಲ್ಯಕ್ಕಿಂತ ಹೆಚ್ಚು ಯಶಸ್ಸು ಸಾಧಿಸಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಚೆನ್ನೈಗೆ ಪೈಪೋಟಿ ನೀಡುತ್ತಿದೆ.