×
Ad

ಧೋನಿ ಪ್ರದರ್ಶನಕ್ಕೆ ಹಸ್ಸಿ ಶ್ಲಾಘನೆ

Update: 2018-05-06 23:55 IST

ಪುಣೆ, ಮೇ 6: ಸ್ಪಿನ್ನರ್‌ಗಳು ಬೌಲಿಂಗ್ ಮಾಡುವಾಗ ವಿಕೆಟ್‌ಕೀಪರ್ ಧೋನಿ ಅತ್ಯಂತ ವೇಗವಾಗಿ ಸ್ಟಂಪಿಂಗ್ ಮಾಡುವ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘‘ಸ್ಪಿನ್ನರ್‌ಗಳು ಬೌಲಿಂಗ್ ಮಾಡುವಾಗ ಧೋನಿ ಅತ್ಯಂತ ವೇಗವಾಗಿ ಸ್ಟಂಪಿಂಗ್ ಮಾಡಬಲ್ಲ ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್ ಆಗಿದ್ದಾರೆ. ಅವರ ವೇಗ ನಿಜಕ್ಕೂ ನಂಬಲಸಾಧ್ಯ’’ ಎಂದು ಶನಿವಾರ ಬೆಂಗಳೂರು ವಿರುದ್ಧ ಐಪಿಎಲ್ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಆಸ್ಟ್ರೇಲಿಯದ ಮಾಜಿ ಆಟಗಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News