ವಿಶ್ವ ರೇಸ್ ವಾಕ್ ಟೂರ್ನಿ: ಭಾರತಕ್ಕೆ 14ನೇ ಸ್ಥಾನ

Update: 2018-05-06 18:28 GMT

ಟೈಕಾಂಗ್(ಚೀನಾ), ಮೇ 6: ಐಎಎಎಫ್ ವರ್ಲ್ಡ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಕೆ.ಟಿ. ಇರ್ಫಾನ್ 49ನೇ ಸ್ಥಾನ ಪಡೆದಿದ್ದು, ಭಾರತ 14ನೇ ಸ್ಥಾನದೊಂದಿಗೆ ಟೂರ್ನಿ ಕೊನೆಗೊಳಿಸಿದೆ.

ಕೇರಳದ ಅಥ್ಲೀಟ್ ಇರ್ಫಾನ್ ಒಂದು ಗಂಟೆ, 29 ನಿಮಿಷ ಹಾಗೂ 12 ಸೆಕೆಂಡ್‌ನಲ್ಲಿ ರೇಸ್‌ನ್ನು ಮುಕ್ತಾಯಗೊಳಿಸಿದರು. ಇರ್ಫಾನ್ ಸಹ ಆಟಗಾರರಾದ ವಿಕಾಸ್ ಸಿಂಗ್ ಹಾಗೂ ನೀರಜ್ ಶರ್ಮ ಕ್ರಮವಾಗಿ 64ನೇ ಹಾಗೂ 71ನೇ ಸ್ಥಾನ ಪಡೆದಿದ್ದಾರೆ. ವಿಕಾಸ್ 1 ಗಂಟೆ, 31 ನಿಮಿಷ, 50 ಸೆಕೆಂಡ್‌ಗಳಲ್ಲಿ, ನೀರಜ್ 1 ಗಂಟೆ, 32 ನಿಮಿಷ ಹಾಗೂ 56 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ.

ಜಪಾನ್ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ವೈಯಕ್ತಿಕ ಪ್ರಶಸ್ತಿ ಜಪಾನ್‌ನ ಕೊಕಿ ಕೆಡಾ ಪಾಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News