ಕಲೆಯಿಂದ ಮಾನಸಿಕ ನೆಮ್ಮದಿ ಸಾಧ್ಯ: ಪೂರ್ಣಿಮಾ ಬಾಳಿಗಾ

Update: 2018-05-07 14:35 GMT

ಉಡುಪಿ, ಮೇ 7: ಸಂಗೀತ, ಚಿತ್ರಕಲೆ ಸೇರಿದಂತೆ ವಿವಿಧ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಜೀವನ ಮತ್ತು ಆರೋಗ್ಯಕ್ಕೆ ಉತ್ತಮ. ಕಲೆಯಿಂದ ಇಂದಿನ ಕೆಲಸದ ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿಯನ್ನು ಪಡೆಯ ಬಹುದಾಗಿದೆ ಎಂದು ಮಣಿಪಾಲ ವಿವಿಯ ಉಪಕುಲಪತಿ ಪೂರ್ಣಿಮಾ ಬಾಳಿಗಾ ಹೇಳಿದ್ದಾರೆ.

ಉಡುಪಿ ಇನಾಯತ್ ಆರ್ಟ್ ಗ್ಯಾಲರಿ ವತಿಯಿಂದ ಆರ್ಟ್ ಮ್ಯಾನ್‌ಶನ್ ಅಪಾರ್ಟ್‌ಮೆಂಟ್ ಉದ್ಘಾಟನಾ ಪ್ರಯುಕ್ತ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಲಾದ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು.

ಆರ್ಟ್ ಮ್ಯಾನ್‌ಶನ್ ಅಪಾರ್ಟ್‌ಮೆಂಟ್‌ನ್ನು ಉದ್ಘಾಟಿಸಿ ಇಂದ್ರಾಳಿಯ ವೌಲಾನ ಮಸಿಯುಲ್ಲ ಖಾನ್ ಕಾಸ್ಮಿ ಮಾತನಾಡಿ, ಎಲ್ಲ ಧರ್ಮದವರಿಗೂ ದೇವರು ಒಬ್ಬನೇ. ಬದುಕಿನಲ್ಲಿ ಉತ್ತಮ ಕೆಲಸ ಮಾಡುವುದರಿಂದ ಸಾವಿನ ನಂತರವೂ ಹೆಸರು ಉಳಿಯಲು ಸಾಧ್ಯ ಎಂದು ತಿಳಿಸಿದರು.

ವಾಲ್ ಆರ್ಟ್ ಕಾರ್ಯಾಗಾರ ಮತ್ತು ಪ್ರದರ್ಶನವನ್ನು ಶಾಂತಾ ವಿ. ಆಚಾರ್ಯ ಉದ್ಘಾಟಿಸಿ ಶುಭಾ ಹಾರೈಸಿದರು. ಅಧ್ಯಕ್ಷತೆಯನ್ನು ಬಡಗಬೆಟ್ಟು ಸೊಸೈಟಿಯ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಬಾಲಕೃಷ್ಣ ಹಂದೆ, ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್, ಕಾರ್ಯದರ್ಶಿ ಸಕು ಪಾಂಗಾಳ, ಕರಾಮತ್ ಅಲಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಲಕ್ಷ್ಮೀನಾರಾಯಣ ಭಟ್, ವೇಣುಗೋಪಾಲ ರಾವ್, ಚೇತನ್ ಕುಮಾರ್, ವಿಶ್ವನಾಥ್ ಭಟ್ ಅವರನ್ನು ಸನ್ಮಾನಿಸಲಾಯಿತು. ಇನಾಯತ್ ಆರ್ಟ್ ಗ್ಯಾಲರಿಯ ನಿರ್ದೇಶಕ ಲಿಯಾ ಕತ್ ಅಲಿ ಉಪಸ್ಥಿತರಿದ್ದರು. ಮಧುಸೂದನ್ ಹೇರೂರು ಸ್ವಾಗತಿಸಿ ದರು. ರಾಘವೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಕಲಾಪ್ರದರ್ಶನದಲ್ಲಿ ಆರ್ಟಿಸ್ಟ್ ಫೋರಂನ 30 ಮಂದಿ ಸದಸ್ಯರು ರಚಿಸಿದ 30 ವಿವಿಧ ಮಾಧ್ಯಮಗಳ ಕಲಾಕೃತಿಗಳು ಮತ್ತು ಚಿತ್ರಕಲಾ ಮಂದಿರದ 11 ಮಂದಿ ಕಲಾವಿದರು ರಚಿಸಿದ ಗೋಡೆ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಮೇ 9ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 7ರವರೆಗೆ ಈ ಕಲಾ ಪ್ರದರ್ಶನ ಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News