ಎಸೆಸೆಲ್ಸಿ ಫಲಿತಾಂಶ: ಒಂದೇ ಕುಟುಂಬದ ಮೂವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ !

Update: 2018-05-07 15:26 GMT
ಸನಾ ಸುಹಾನ

ಮಿತ್ತೂರು, ಮೇ 7: ಇಂದು ಪ್ರಕಟವಾದ ಎಸೆಸೆಲ್ಸಿ ಫಲಿತಾಂಶದಲ್ಲಿ ಪುತ್ತೂರು ಸುದಾನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸನಾ ಸುಹಾನ ಮಿತ್ತೂರು 533 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ತನ್ನ ಕುಟುಂಬದ ಮೂವರು ಕೂಡ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಕೆಎಸ್ಆರ್ಟಿಸಿಯಲ್ಲಿ ಸುಪರ್ ವೈಸರ್ ಆಗಿರುವ ಮಿತ್ತೂರು ಅಝೀಝ್ ಸೇಟ್ ಅವರ ಪುತ್ರಿ ಸನಾ ಸುಹಾನ 88.83 ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಆಕೆಯ ಸಹೋದರ, ಸಹೋದರಿ ಕೂಡ ಈ ಹಿಂದೆ ಡಿಸ್ಟಿಂಕ್ಷನ್ ನಲ್ಲಿ ಪಾಸಾಗುವ ಮೂಲಕ ಕುಟುಂಬದ ಮೂವರು ಕೂಡ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಸಾಧನೆ ಮಾಡಿದ್ದಾರೆ.

ಸನಾ ಸುಹಾನಾಳ ಹಿರಿಯ ಸಹೋದರ ಅಮೀರ್ ಸುಹೈಲ್ ಈ ಹಿಂದೆ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಎಂಬಿಎಯಲ್ಲಿ 90% ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದರೆ, ಹಿರಿಯ ಸಹೋದರಿ ರೋಷನ್ ಸುನೈನಾ ಬಿಇ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News