ಸನ್‌ರೈಸರ್ಸ್‌ ಹೈದರಾಬಾದ್‌ಗೆ 5 ರನ್‌ಗಳ ಜಯ

Update: 2018-05-07 18:24 GMT
ಹೈದಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ  56ರನ್( 39ಎ, 5ಬೌ,2ಸಿ) 

 ಹೈದರಾಬಾದ್, ಮೇ7: ಐಪಿಎಲ್ ಟ್ವೆಂಟಿ-20 ಟೂರ್ನಿಯ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡ 5 ರನ್‌ಗಳ ಜಯ ಗಳಿಸಿದೆ.
ರಾಜೀವ್ ಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 147 ರನ್‌ಗಳ ಸವಾಲನ್ನು ಪಡೆದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 141 ರನ್ ಗಳಿಸಿತು.
ಸನ್‌ರೈಸರ್ಸ್‌ ತಂಡದ ಸಂಘಟಿತ ದಾಳಿಗೆ ಸಿಲುಕಿದ ಆರ್‌ಸಿಬಿ ಗೆಲುವಿನ ದಡ ಸೇರುವಲ್ಲಿ ಎಡವಿತು.
ಆರ್‌ಸಿಬಿಯ ನಾಯಕ ವಿರಾಟ್ ಕೊಹ್ಲಿ(39), ಪಾರ್ಥಿವ್ ಪಟೇಲ್ (20), ಎಂಎಂ ಅಲಿ(10), ಮನ್‌ದೀಪ್ ಸಿಂಗ್(ಔಟಾಗದೆ 21) ಮತ್ತು ಗ್ರಾಂಡ್‌ಹೊಮ್ಮೆ (33) ಎರಡಂಕೆಯ ಸ್ಕೋರ್ ದಾಖಲಿಸಿದರು.
ಸನ್‌ರೈಸರ್ಸ್‌ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟಾಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News