ಅತ್ಯಾಚಾರಕ್ಕೆ ಉಡುಪು ಕಾರಣವಲ್ಲ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Update: 2018-05-08 22:14 IST
ಹೊಸದಿಲ್ಲಿ, ಮೇ 8: ಮಹಿಳೆಯರ ಉಡುಪು ಅತ್ಯಾಚಾರಕ್ಕೆ ಕಾರಣ ಎಂಬುದು ಹಾಸ್ಯಾಸ್ಪದ. ಆದುದರಿಂದ ನಾವು ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಹಿಳೆಯ ಶೋಷಣೆ ಮಾಡುವ ಜನರ ಬಗ್ಗೆ ನೀವು ತಿಳಿದಿರುವಾಗ ಬಾಹ್ಯಾ ಸಂಸ್ಥೆಗಳು ಯಾವ ಪ್ರಯತ್ನಗಳನ್ನು ಮಾಡಬಹುದು ? ಕೆಲವು ಜನರು ಮಹಿಳೆಯ ಉಡುಪು ಕಾರಣ ಎಂದು ಹೇಳುತ್ತಾರೆ. ಹಾಗಾದರೆ, ವೃದ್ಧ ಮಹಿಳೆಯರು ಯಾಕೆ ಅತ್ಯಾಚಾರಕ್ಕೆ ಒಳಗಾಗುತ್ತಾರೆ ? ಮಕ್ಕಳ ಮೇಲೆ ಯಾಕೆ ಅತ್ಯಾಚಾರ ನಡೆಯುತ್ತಿದೆ ಎಂದು ಎಫ್‌ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪ್ರಶ್ನಿಸಿದರು.
ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಭದ್ರತಾ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಬೇಕಿದೆ. ‘‘ಅತ್ಯಾಚಾರದ 10 ಘಟನೆಗಳಲ್ಲಿ 7 ಘಟನೆಗಳಲ್ಲಿ ಆರೋಪಿಗಳು ಸಂತ್ರಸ್ತರ ಸಂಬಂಧಿಕರು, ಗೆಳೆಯರು ಹಾಗೂ ನೆರೆಕರೆಯವರು ಆಗಿರುತ್ತಾರೆ.’’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.