ಮಹಿಳೆಯರ ಖಾಯಂ ನೇಮಕಕ್ಕೆ ಶ್ರೀಘ್ರ ಭಾರತೀಯ ಸೇನೆಯಿಂದ ವಿಶೇಷ ಹುದ್ದೆ

Update: 2018-05-08 18:13 GMT

ಹೊಸದಿಲ್ಲಿ, ಮೇ 8: ವಿಶೇಷ ಹುದ್ದೆಗಳನ್ನು ರೂಪಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಖಾಯಂ ನೇಮಕ ಯೋಜನೆಯನ್ನು ಸೇನೆ ಅಂತಿಮಗೊಳಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೈಬರ್ ಹಾಗೂ ಐಟಿ, ಸೇನಾ ಪೊಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ವಿಭಾಗಗಳು ಹಾಗೂ ಸೇವಾ ಆಯ್ಕೆ ಮಂಡಳಿಯ ವಿವಿಧ ಹುದ್ದೆಗಳಿಗೆ ಮಹಿಳೆಯರನ್ನು ಖಾಯಂ ಆಗಿ ನೇಮಕ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಸೇನೆ ಶಿಕ್ಷಣ ಕಾರ್ಪ್ಸ್ ಹಾಗೂ ಜಡ್ಜ್ ಅಡ್ವೊಕೇಟ್ ಜನರಲ್ ಡಿಪಾರ್ಟ್‌ಮೆಂಟ್‌ಗೆ ಮಾತ್ರ ಮಹಿಳೆಯರನ್ನು ಖಾಯಂ ನೇಮಕ ಮಾಡುತ್ತಿದೆ. ಸೇನೆಯ ಶಾರ್ಟ್ ಸರ್ವೀಸ್ ಕಮಿಷನ್‌ಗೆ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಕ ಮಾಡಲಾಗಿದೆ ಹಾಗೂ ಅವರ ಗರಿಷ್ಠ ಅಧಿಕಾರಾವಧಿ 14 ವರ್ಷ. ಮಹಿಳೆಯರನ್ನು ನೇಮಕ ಮಾಡುವ ಕ್ಷೇತ್ರಗಳನ್ನು ವಿಸ್ತರಿಸಲು ಸೇನೆ ಗಂಭೀರವಾಗಿ ಕಾರ್ಯಾಚರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಖಾಯಂ ನೇಮಕ ವರ್ಗದ ಅಡಿಯಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲು ವಿಶೇಷ ಹುದ್ದೆಗಳನ್ನು ರೂಪಿಸುವ ಚಿಂತನೆಯನ್ನು ಸೇನೆ ಪರಿಗಣಿಸಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News