ಅಫ್ಘಾನಿಸ್ತಾನದಲ್ಲಿ ಭೂಕಂಪ: ಉ.ಭಾರತದ ಹಲವೆಡೆ ಕಂಪಿಸಿದ ಭೂಮಿ

Update: 2018-05-09 14:57 GMT

ಹೊಸದಿಲ್ಲಿ,ಮೇ 9: ಬುಧವಾರ ಸಂಜೆ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು,ಉತ್ತರ ಭಾರತದ ಪಂಜಾಬ್,ಹರ್ಯಾಣ ಮತ್ತು ದಿಲ್ಲಿಗಳಲ್ಲಿ ಭೂಮಿಯು ಕಂಪಿಸಿದ್ದು, ಜನರ ಅನುಭವಕ್ಕೆ ಬಂದಿದೆ.

 ಸಂಜೆ 4.15ರ ಸುಮಾರಿಗೆ ಉತ್ತರ ಭಾರತದಲ್ಲಿ ಭೂಮಿ ನಡುಗಿದ್ದು, ಅಫ್ಘಾನಿಸ್ತಾನ್-ಕಝಖಸ್ತಾನ್ ಗಡಿಯಲ್ಲಿ ಕೇಂದ್ರಬಿಂದುವನ್ನು ಹೊಂದಿದ್ದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.

ಯಾವುದೇ ಜೀವಹಾನಿ ಅಥವಾ ಆಸ್ತಿಹಾನಿ ಸಂಭವಿಸಿಲ್ಲ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News