ಏಕಕಾಲದಲ್ಲಿ ಚುನಾವಣೆ: ಚರ್ಚೆ ನಡೆಸಲಿರುವ ಚು.ಆಯೋಗ, ಕಾನೂನು ಮಂಡಳಿ

Update: 2018-05-09 15:39 GMT

ಹೊಸದಿಲ್ಲಿ, ಮೇ.9: ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲು ಚುನಾವಣಾ ಆಯೋಗ ಮತ್ತು ಕಾನೂನು ಆಯೋಗ ಮುಂದಿನ ವಾರ ಸಭೆಯನ್ನು ಕರೆಯುವ ಸಾಧ್ಯತೆಯಿದೆ. ಮೇ 16ರಂದು ಈ ವಿಷಯದ ಬಗ್ಗೆ ಚರ್ಚಿಸಲು ಆಯೋಗವು ಕಾನೂನು ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಾಧೀಶ ಬಿ.ಎಸ್ ಚೌಹಾಣ್ ಅವರನ್ನು ಆಹ್ವಾನಿಸಿದೆ.

ಚುನಾವಣೆಗಳನ್ನು ನಡೆಸುವ ಅಧಿಕಾರವು ಚುನಾವಣಾ ಆಯೋಗಕ್ಕೆ ಇರುವುದರಿಂದ ಏಕಕಾಲ ಚುನಾವಣೆ ನಡೆಸುವ ಕುರಿತು ಆಯೋಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಕಾನೂನು ಆಯೋಗ ತಿಳಿಸಿದೆ. ಬಹುತೇಕ ರಾಜ್ಯಗಳು ಸಂವಿಧಾನದ ಕನಿಷ್ಟ ಎರಡು ನಿಬಂಧನೆಗಳಿಗೆ ಮಾಡಲಾಗುವ ತಿದ್ದುಪಡಿಯನ್ನು ಅಂಗೀಕರಿಸಿದರೆ 2019ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಬಹುದು. ಜೊತೆಗೆ ಜನರ ಪ್ರತಿನಿಧಿತ್ವ ಕಾಯ್ದೆಗೂ ತಿದ್ದುಪಡಿ ತರುವ ಅಗತ್ಯವಿದೆ ಎಂದು ಆಯೋಗ ತಿಳಿಸಿದೆ.

 ಈ ಬಗ್ಗೆ ಸಿದ್ಧಪಡಿಸಲಾಗಿರುವ ವರದಿಯಲ್ಲಿ, ಸಂವಿಧಾನ ( ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅವಧಿಗೆ ಸಂಬಂಧಿಸಿದ ವಿಧಿ 83(2) ಮತ್ತು 172(1)) ಹಾಗೂ ಜನರ ಪ್ರತಿನಿಧಿತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವ ಮೂಲಕ ಏಕಕಾಲ ಚುನಾವಣೆ ನಡೆಸಲು ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News