×
Ad

ಸಾಯಲು ಸ್ವಿಝರ್‌ಲ್ಯಾಂಡ್‌ಗೆ ಹೋಗಿದ್ದ ವಿಜ್ಞಾನಿ ಆತ್ಮಹತ್ಯೆ

Update: 2018-05-10 22:55 IST

ಜಿನೇವ, ಮೇ 10: ಬದುಕನ್ನು ಕೊನೆಗೊಳಿಸುವುದಕ್ಕಾಗಿ ಸ್ವಿಟ್ಸರ್‌ಲ್ಯಾಂಡ್‌ಗೆ ತೆರಳಿದ್ದ 104 ವರ್ಷದ ಆಸ್ಟ್ರೇಲಿಯನ್ ವಿಜ್ಞಾನಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಯಲು ಅವರಿಗೆ ನೆರವು ನೀಡಿರುವ ಫೌಂಡೇಶನ್ ತಿಳಿಸಿದೆ.

ವಿಜ್ಞಾನಿ ಡೇವಿಡ್ ಗುಡಾಲ್‌ಗೆ ಗುಣಪಡಿಸಲಾಗದ ಕಾಯಿಲೆಯೇನೂ ಇರಲಿಲ್ಲ. ಆದರೆ, ತನ್ನ ಬದುಕಿನ ಗುಣಮಟ್ಟ ಗಣನೀಯವಾಗಿ ಕುಸಿದಿದೆ, ಹಾಗಾಗಿ, ತನು ಸಾಯಬಯಸುತ್ತೇನೆ ಎಂದು ಅವರು ಹೇಳಿದ್ದರು. ಆಸ್ಟ್ರೇಲಿಯದಲ್ಲಿ ನೆರವು ಪಡೆದು ಆತ್ಮಹತ್ಯೆ ಮಾಡಿಕೊಳ್ಳಲು ಅವರಿಗೆ ಅನುಮತಿ ಲಭಿಸಿರಲಿಲ್ಲ.

ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಗುಡಾಲ್ ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಗಿದೆ ಎಂದು ‘ಎಕ್ಸಿಟ್ ಇಂಟರ್‌ನ್ಯಾಶನಲ್’ನ ನಿರ್ದೇಶಕ ಫಿಲಿಪ್ ನಿಶ್ಕ್ ಹೇಳಿದರು.

ಆತ್ಮಹತ್ಯೆ ಮಾಡಿಕೊಳ್ಳುವ ಕಲ್ಪನೆ ಬಗ್ಗೆ ತಾನು 20 ವರ್ಷಗಳಿಂದ ಯೋಚಿಸುತ್ತಿದ್ದೆ, ಆದರೆ ಕಳೆದ ವರ್ಷದಿಂದ ಬದುಕಿನ ಗುಣಮಟ್ಟ ಕುಸಿದ ಬಳಿಕ ತಾನೇ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿದೆ ಎಂದು ಬ್ರಿಟಿಶ್ ಸಂಜಾತ ವಿಜ್ಞಾನಿ ಈ ವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News