ಕರ್ನಾಟಕ ವಿಧಾನ ಸಭೆ ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Update: 2018-05-14 15:18 GMT

ಹೊಸದಿಲ್ಲಿ, ಮೇ 13: ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಏರಿಕೆಯಾಗಿರುವುದನ್ನು ಕರ್ನಾಟಕ ವಿಧಾನ ಸಭೆ ಚುನಾವಣೆ ಪೂರ್ವ 19 ದಿನಗಳ ಬಳಿಕ ಗ್ರಾಹಕರಿಗೆ ವರ್ಗಾಯಿಸಲು ಸಾರ್ವಜನಿಕ ವಲಯದ ತೈಲ ಕಂಪೆನಿಗಳು ಸೋಮವಾರ ಪೆಟ್ರೋಲ್ ದರವನ್ನು 17 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 21 ಪೈಸೆಗೆ ಏರಿಕೆ ಮಾಡಿದೆ.

ದಿಲ್ಲಿಯೆಲ್ಲಿ ಪೆಟ್ರೋಲ್ ದರ ರೂ. 74.63ರಿಂದ ರೂ. 74.80ಗೆ ಏರಿಸಲಾಗಿದೆ ಹಾಗೂ ಡೀಸೆಲ್ ದರವನ್ನು ರೂ. 65.93ರಿಂದ ರೂ. 66.14ಕ್ಕೆ ಏರಿಸಲಾಗಿದೆ ಎಂದು ರಾಜ್ಯ ಸ್ವಾಮಿತ್ವದ ತೈಲ ಮಾರುಕಟ್ಟೆ ಕಂಪೆನಿಗಳು ಹೊರಡಿಸಿದ ಬೆಲೆ ಅಧಿಸೂಚನೆ ತಿಳಿಸಿದೆ.

ಇದರೊಂದಿಗೆ ಡೀಸೆಲ್ ಬೆಲೆ ದಾಖಲೆ ಏರಿಕೆಯಾಗಿದೆ ಹಾಗೂ ಪೆಟ್ರೋಲ್ ಬೆಲೆ 56 ತಿಂಗಳಲ್ಲೇ ದಾಖಲೆ ಏರಿಕೆಯಾಗಿದೆ.

ಉತ್ಪಾದನಾ ವೆಚ್ಚೆ ಏರಿಕೆ ಆಗಿದ್ದರೂ ಕರ್ನಾಟಕ ವಿಧಾನ ಸಭೆ ಚುನಾವಣೆ ಎದುರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪೆನಿಗಳು ಮೂರು ವಾರಗಳ ಕಾಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರಲಿಲ್ಲ. ಕನಾಟಕದಲ್ಲಿ ಶನಿವಾರ ಚುನಾವಣೆ ನಡೆದಿದ್ದು, ಬಳಿಕ ಸಂಸ್ಥೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ದಿನನಿತ್ಯ ಪರಿಸ್ಕರಿಸಲು ಆರಂಬಿಸಿವೆ.

ಅಂತಾರಾಷ್ಟ್ರೀಯ ತೈಲೆ ಬೆಲೆ ಏರಿಕೆ ಹಾಗೂ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಬೆಲೆ ಕುಸಿತದ ಪರಿಣಾಮ ಹೆಚ್ಚುವರಿ ವೆಚ್ಚ ಭರಿಸಿಕೊಂಡಿರುವುದರಿಂದ ರಾಜ್ಯ ಸ್ವಾಮಿತ್ವದ ತೈಲ ಕಂಪೆನಿಗಳಿಗೆ 500 ಕೋ. ರೂ. ನಷ್ಟ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News