ಕೋಲ್ಕತಾ ತಂಡಕ್ಕೆ ಜಯ

Update: 2018-05-15 18:13 GMT

ಕೋಲ್ಕತಾ, ಮೇ 15: ಐಪಿಎಲ್ ಟ್ವೆಂಟಿ-20 ಟೂರ್ನಿಯ 49ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ ತಂಡ 6 ವಿಕೆಟ್‌ಗಳ ಜಯ ಗಳಿಸಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 143 ರನ್‌ಗಳ ಸವಾಲು ಪಡೆದ ಕೋಲ್ಕತಾ ತಂಡ ಇನ್ನೂ 2ಓವರ್‌ಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತು.

ಕ್ರಿಸ್ ಲಿನ್ 45ರನ್, ನಾಯಕ ದಿನೇಶ್ ಕಾರ್ತಿಕ್ ಔಟಾಗದೆ 31ರನ್, ಸುನೀಲ್ ನರೇನ್ 21ರನ್ ರಸೆಲ್ ಔಟಾಗದೆ 20 ರನ್, ರಾಬಿನ್ ಉತ್ತಪ್ಪ 4ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

ರಾಜಸ್ಥಾನ ರಾಯಲ್ಸ್ ತಂಡ 19 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟಾಗಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡ ಕುಲ್ ದೀಪ್ ಯಾದವ್(20ಕ್ಕೆ 4), ಅ್ಯಂಡ್ರೆ ರಸೆಲ್(13ಕ್ಕೆ 2), ಪ್ರಸಿದ್ಧ ಕೃಷ್ಣ(35ಕ್ಕೆ 2), ಶಿವಮ್ ಮಾವಿ(44ಕ್ಕೆ 1), ಸುನೀಲ್ ನರೇನ್(29ಕ್ಕೆ 1) ದಾಳಿಗೆ ಸಿಲುಕಿ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ.

ರಾಜಸ್ಥಾನ ರಾಯಲ್ಸ್ ತಂಡದ ಯಾರಿಂದಲೂ ಅರ್ಧಶತಕದ ಕೊಡುಗೆ ಬರಲಿಲ್ಲ.ವಿಕೆಟ್ ಕೀಪರ್ ಜೋಸ್ ಬಟ್ಲರ್(39) ಗರಿಷ್ಠ ಸ್ಕೋರ್ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ರಾಹುಲ್ ತ್ರಿಪಾಠಿ(27), ಜಯದೇವ್ ಉನಾದ್ಕಟ್(26), ಅಜಿಂಕ್ಯ ರಹಾನೆ(11), ಸಂಜು ಸ್ಯಾಮ್ಸನ್(12), ಬೆನ್ ಸ್ಟೋಕ್ಸ್(11) ಎರಡಂಕೆಯ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News