ಚೊಚ್ಚಲ ಟೆಸ್ಟ್ ನಲ್ಲಿ ಇತಿಹಾಸ ರಚನೆಯಿಂದ ವಂಚಿತವಾದ ಐರ್ಲೆಂಡ್

Update: 2018-05-15 18:29 GMT

ಹೊಸದಿಲ್ಲಿ, ಮೇ 15: ಪಾಕಿಸ್ತಾನ ವಿರುದ್ಧ ಡಬ್ಲಿನ್‌ನಲ್ಲಿ ಐರ್ಲೆಂಡ್ ತಂಡ ಟೆಸ್ಟ್ ಆಡಿದ 11ನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಮಳೆಯಿಂದಾಗಿ ಐದು ದಿನಗಳ ಪಂದ್ಯ ನಾಲ್ಕು ದಿನಗಳಿಗೆ ಸೀಮಿತಗೊಂಡಿದ್ದು, ಐರ್ಲೆಂಡ್ ಚೊಚ್ಚಲ ಟೆಸ್ಟ್ ಗೆಲುವಿನಿಂದ ವಂಚಿತವಾಯಿತು. ಪಾಕಿಸ್ತಾನ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಅಝರ್ ಅಲಿ ಹಾಗೂ ಇಮಾನ್‌ವುಲ್ ಹಕ್ ಬೇಗನೆ ಔಟಾದರು. ಬಾಯ್ಡ ರಾಂಕಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಐರ್ಲೆಂಡ್‌ನ ಮೊದಲ ಬೌಲರ್ ಎನಿಸಿಕೊಂಡರು. ಅಸದ್ ಶಫೀಕ್(62) ಹಾಗೂ ಫಹೀಮ್ ಅಶ್ರಫ್(83)ಪಾಕ್ ತಂಡ 9 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಲು ನೆರವಾದರು.

ಐರ್ಲೆಂಡ್ ತಂಡ ಕೇವಿನ್ ಒಬ್ರಿಯಾನ್(40)ಸಾಹಸದ ಹೊರತಾಗಿಯೂ 130 ರನ್‌ಗೆ ಆಲೌಟಾಯಿತು. 180 ರನ್ ಮುನ್ನಡೆ ಪಡೆದ ಪಾಕ್ 16 ವರ್ಷಗಳ ಬಳಿಕ ಎದುರಾಳಿ ತಂಡಕ್ಕೆ ಫಾಲೋ-ಆನ್ ವಿಧಿಸಿತು. ಎರಡನೇ ಇನಿಂಗ್ಸ್ ನಲ್ಲಿ ಐರ್ಲೆಂಡ್ ಉತ್ತಮ ಆರಂಭ ಪಡೆದಿತ್ತು. ವಿಲಿಯಮ್ ಪೋರ್ಟರ್‌ಫೀಲ್ಡ್ ಹಾಗೂ ಎಡ್ ಜಾಯ್ಸ್ ಮೊದಲ ವಿಕೆಟ್‌ಗೆ 69 ರನ್ ಸೇರಿಸಿದರು. ಆದರೆ, ಐರ್ಲೆಂಡ್ 157 ರನ್‌ಗೆ 6 ವಿಕೆಟ್ ಕಳೆದುಕೊಂಡಿತು. ಒಬ್ರಿಯಾನ್ ಬಾರಿಸಿದ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ 339 ರನ್ ಗಳಿಸಿದ ಐರ್ಲೆಂಡ್ 160 ರನ್ ಗುರಿ ನೀಡಿತು. ಪಾಕ್ ಒಂದು ಹಂತದಲ್ಲಿ 14 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಹಕ್ ಹಾಗೂ ಆಝಂ ನೆರವಿನಿಂದ ಗೆಲುವು ಸಾಧಿಸಿತು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News