ನಿಯಂತ್ರಣವಿಲ್ಲದ ತೈಲಬೆಲೆ

Update: 2018-05-15 18:37 GMT

ಮಾನ್ಯರೇ,

ಕರ್ನಾಟಕದ ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದ್ದು, ಜನಸಾಮಾನ್ಯರು ತತ್ತರಿಸುವಂತಾಗಿದೆ.

ಕಳೆದ ಮೂರು ವಾರಗಳಿಂದ ಕರ್ನಾಟಕದ ಚುನಾವಣೆಯಲ್ಲಿ ತಮ್ಮ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಕಾರಣಕ್ಕಾಗಿ ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ತಡೆಹಿಡಿದಿದ್ದು ಇದೀಗ ಮತ್ತೆ ತೈಲಬೆಲೆ ಏರುಗತಿಯಲ್ಲಿ ಮುನ್ನಡೆದಿದೆ. ಆಡಳಿಕ್ಕೆ ಬರುವ ಮುನ್ನ ತೈಲಬೆಲೆ ಏರಿಕೆಯ ಬಗ್ಗೆ ಹಿಗ್ಗಾಮುಗ್ಗ ಟೀಕಿಸುತ್ತಿದ್ದ ಬಿಜೆಪಿ ಈಗ ಜನ ಸಾಮಾನ್ಯರು ಬೆಲೆ ಏರಿಕೆಯಿಂದಾಗಿ ಕಂಗೆಡುತ್ತಿದ್ದರೂ ಬೆಲೆ ಏರಿಕೆಯ ಹೊರೆಯನ್ನು ಇಳಿಸುವತ್ತ ಚಿಂತಿಸದಿರುವುದು ಜನಸಾಮಾನ್ಯರ ದೌರ್ಭಾಗ್ಯವೆನ್ನಬೇಕು.

Writer - -ವಿರೂಪಾಕ್ಷಪ್ಪ, ಬೆಂಗಳೂರು

contributor

Editor - -ವಿರೂಪಾಕ್ಷಪ್ಪ, ಬೆಂಗಳೂರು

contributor

Similar News