ರಸ್ತೆ ದಾಟಲು ವ್ಯವಸ್ಥೆ ಇರಲಿ

Update: 2018-05-15 18:37 GMT

ಮಾನ್ಯರೇ,

ಮಂಗಳೂರು ನಗರದ ಕಂಕನಾಡಿ ಫಾದರ್‌ಮುಲ್ಲರ್ ಆಸ್ಪತ್ರೆ ಎದುರಿನ ರಸ್ತೆಯು ಇದೀಗ ಅಗಲವಾಗಿ ಆಧುನೀಕರಣಗೊಂಡಿದೆ. ಆದರೆ ಸುಸಜ್ಜಿತ ರಸ್ತೆಯ ಕಾರಣದಿಂದ ಸದಾ ಜನನಿಬಿಡವಾಗಿರುವ ಈ ರಸ್ತೆಯಲ್ಲಿ ವಾಹನಗಳು ಕೂಡಾ ಅತಿವೇಗವಾಗಿ ಸಂಚರಿಸುತ್ತಿದ್ದು, ಆಸ್ಪತ್ರೆ ಪರಿಸರದಲ್ಲಿ ಸಂಚರಿಸುವ ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಸ್ಮಾರ್ಟ್ ಸಿಟಿಗೆ ತಕ್ಕಂತಿರುವ ರಸ್ತೆಯು ಇಲ್ಲಿ ನಿರ್ಮಾಣವಾಗಿದ್ದರೂ, ಆಸ್ಪತ್ರೆ ಪರಿಸರವಾಗಿರುವುದರಿಂದ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆದಾಟುವುದು ತ್ರಾಸದಾಯಕವಾಗಿದೆ. ಇದಕ್ಕೆ ಕಾರಣ ವಾಹನಗಳ ಅತಿವೇಗ. ವೇಗಮಿತಿಯಿಲ್ಲದ ವಾಹನ ಚಾಲನೆಯಿಂದಾಗಿ ಈಗಾಗಲೇ ಕೆಲವು ಅಪಘಾತಗಳು ಸಂಭವಿಸಿದೆ.
ರಸ್ತೆಗಳ ಗುಣಮಟ್ಟ ಉತ್ತಮಗೊಳಿಸುವುದರ ಜೊತೆಗೆ ಪಾದಚಾರಿಗಳ ಸುರಕ್ಷತೆಗೂ ಗಮನನೀಡಿದರೆ ಜನಸಾಮಾನ್ಯರ ಸುಗಮಸಂಚಾರಕ್ಕೆ ಅನುಕೂಲವಾದೀತು. ಈ ನಿಟ್ಟಿನಲ್ಲಿ ಸಂಬಂಧಿತರು ಇನ್ನಾದರೂ ಆಸ್ಪತ್ರೆ ವಠಾರದಲ್ಲಿ ವಾಹನಗಳು ವೇಗ ಕಡಿಮೆಗೊಳಿಸುವಂತಹ ವ್ಯವಸ್ಥೆ ಮಾಡಿ ಜನಸಾಮಾನ್ಯರು ಸುರಕ್ಷಿತವಾಗಿ ರಸ್ತೆದಾಟಲು ಅನುವುಮಾಡಿಕೊಡಬೇಕಾಗಿದೆ.

Writer - -ಶಿವರಾಜ್ ಕೆ., ಮಂಗಳೂರು

contributor

Editor - -ಶಿವರಾಜ್ ಕೆ., ಮಂಗಳೂರು

contributor

Similar News