ಮಹಿಳಾ ಸುರಕ್ಷೆಗೆ ‘ಪ್ಯಾನಿಕ್ ಬಟನ್’ ಅಳವಡಿಸಲು ಈಶಾನ್ಯ ರೈಲ್ವೆ ಚಿಂತನೆ

Update: 2018-05-16 17:03 GMT

ಲಕ್ನೋ, ಮೇ 16: ರೈಲುಗಳಲ್ಲಿ ಮಹಿಳೆಯರಿಗೆ ಭದ್ರತೆ ಬಲಪಡಿಸುವ ಹಿನ್ನೆಲೆಯಲ್ಲಿ ಬೋಗಿಗಳಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರನ್ನು ನಿಯೋಜಿಸಲು ಹಾಗೂ ‘ಪ್ಯಾನಿಕ್ ಬಟನ್’ ಅಳವಡಿಸಲು ಈಶಾನ್ಯ ರೈಲ್ವೆ ಚಿಂತಿಸುತ್ತಿದೆ. ಈ ವರ್ಷ ಮಹಿಳೆ ಮತ್ತು ಮಕ್ಕಳ ಸುರಕ್ಷೆ ಬಗ್ಗೆ ಗಮನ ಕೇಂದ್ರೀಕರಿಸಿರುವ ರೈಲ್ವೆ, ಆರ್‌ಪಿಎಫ್‌ನಲ್ಲಿ ಮಹಿಳೆಯರನ್ನು ನಿಯೋಜಿಸುವುದಲ್ಲದೆ, ರಾತ್ರಿ ವೇಳೆ ಉಪ ನಗರದ ರೈಲುಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಯೋಜಿಸಿದೆ ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂರ್ಪಕ ಅಧಿಕಾರಿ ಸಂಜಯ್ ಯಾದವ್ ಹೇಳಿದ್ದಾರೆ.

ರೈಲುಗಳಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗೆಗಿನ ವರದಿಯ ಹಿನ್ನೆಲೆಯಲ್ಲಿ ಗಾರ್ಡ್‌ನ ಬೋಗಿಗೆ ಸಂಪರ್ಕ ಹೊಂದಿರುವ ‘ಪ್ಯಾನಿಕ್ ಬಟನ್’ಗಳನ್ನು ಅಳವಡಿಸಲು ಕೂಡ ರೈಲ್ವೆ ಪ್ರಸ್ತಾಪಿಸಿದೆ. ಪ್ರಸ್ತುತ ಮಹಿಳಾ ಪ್ರಯಾಣಿಕರು ತುರ್ತು ಪರಿಸ್ಥಿತಿ ಸಂದರ್ಭ ಸಹಾಯವಾಣಿಗೆ ಕರೆ ಮಾಡುವುದು ಎಸ್‌ಎಂಎಸ್ ಮಾಡುವುದು ಅಥವಾ ಚೈನ್ ಎಳೆಯುವುದನ್ನು ಅವಲಂಬಿಸಿದ್ದಾರೆ. ಆದರೆ, ಹೊಸ ವ್ಯವಸ್ಥೆಯಿಂದ ಕೂಡಲೇ ಕ್ರಮ ತೆಗೆದುಕೊಳ್ಳಲು ಅನುಕೂಲ ವಾಗುತ್ತದೆ ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News