10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಸಿಹಿ ಹಂಚಿ, ಮೆರವಣಿಗೆ ನಡೆಸಿ ಸಂಭ್ರಮ ಆಚರಿಸಿದ ಕುಟುಂಬ

Update: 2018-05-16 17:16 GMT

ಭೋಪಾಲ್, ಮೇ 16: ಹತ್ತನೇ ತರಗತಿ ಪರೀಕ್ಷೆಯಲ್ಲಿ ಬಾಲಕನೋರ್ವ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ಆತನ ಕುಟುಂಬ ಹೂಗುಚ್ಛ ನೀಡಿ, ಸಿಹಿ ಹಂಚಿ, ಮೆರವಣಿಗೆ ನಡೆಸಿ ಸಂಭ್ರಮಿಸಿದ ಘಟನೆ ಮಧ್ಯಪ್ರದೇಶದ ಭೋಪಾಲದ ಸಾಗರ್‌ನಲ್ಲಿ ಬುಧವಾರ ನಡೆದಿದೆ. ಈ ಘಟನೆ ಆರಂಭದಲ್ಲಿ ಸಾಗರ್‌ನ ನಾಗರಿಕರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿತ್ತು. ಈ ವಿಶಿಷ್ಟ ಸಂಭ್ರಮಾಚರಣೆಯ ಬಗ್ಗೆ ಕುಟುಂಬ ವಿವರಣೆ ನೀಡಿದ ಬಳಿಕ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಪರೀಕ್ಷೆಯಲ್ಲಿನ ವಿಫಲತೆ ಸಣ್ಣ ಪ್ರಾಯದ ಪುತ್ರನ ಭವಿಷ್ಯ ಹಾಳು ಮಾಡಬಹುದು. ಇದು ಬದುಕಿನ ಕೊನೆಯ ಪರೀಕ್ಷೆ ಅಲ್ಲ ‘‘ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಬಳಿಕ ಆತ ಯಾವುದೇ ಮೂರ್ಖ ಹೆಜ್ಜೆಗಳನ್ನು ಇರಿಸುವುದನ್ನು ನಾವು ಬಯಸುವುದಿಲ್ಲ’’ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಬಾಲಕ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾನೆ. ಫಲಿತಾಂಶ ತಿಳಿದ ಕೂಡಲೇ ಆತನ ತಂದೆ ಮಗನನ್ನು ಅಪ್ಪಿಕೊಂಡರು. ಸಂಬಂಧಿಕರು ಹಾಗೂ ಗೆಳೆಯರನ್ನು ಕರೆದು ಸಿಹಿ ಹಂಚಿದರು ಹಾಗೂ ಮೆರವಣಿಗೆ ನಡೆಸಿದರು. ತಂದೆಯ ಸಕಾರಾತ್ಮಕ ವರ್ತನೆಯನ್ನು ಗಮನಿಸಿದ ಸಾಗರ್‌ನ ಸ್ಥಳೀಯರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News