ಐಪಿಎಲ್ ಟೀ-ಶರ್ಟ್ ವಿನಿಮಯ ಮಾಡಿಕೊಂಡ ರಾಹುಲ್-ಹಾರ್ದಿಕ್

Update: 2018-05-17 11:10 GMT

ಮುಂಬೈ, ಮೇ 17: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರ ಸಮ್ಮುಖದಲ್ಲಿ ತಾವು ಧರಿಸಿದ್ದ ಟೀ-ಶರ್ಟ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಗಮನ ಸೆಳೆದಿದ್ದಾರೆ.

 ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಾಹುಲ್ ಭರ್ಜರಿ ಅರ್ಧಶತಕದ(94 ರನ್, 60 ಎಸೆತ)ಹೊರತಾಗಿಯೂ ಪಂಜಾಬ್ ತಂಡ ಕೇವಲ 3 ರನ್‌ನಿಂದ ಸೋಲುಂಡಿತ್ತು. ಪಂದ್ಯ ಮುಗಿದ ಬಳಿಕ ರಾಹುಲ್ ಹಾಗೂ ಪಾಂಡ್ಯ ಟೀ-ಶರ್ಟ್‌ಗಳನ್ನು ವಿನಿಮಯ ಮಾಡಿಕೊಂಡರು.

ಫುಟ್ಬಾಲ್ ಪಂದ್ಯಗಳಲ್ಲಿ ಆಟಗಾರರು ತಮ್ಮ ಜೆರ್ಸಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಇಬ್ಬರು ಆಟಗಾರರು ಜೆರ್ಸಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ.

ಕ್ರಿಕೆಟ್ ಪಂದ್ಯಕ್ಕೆ ಗೌರವ ಸಲ್ಲಿಸುವ ಸಂಕೇತವಾಗಿ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಪಂದ್ಯ ಮುಗಿದ ಬಳಿಕ ಜೆರ್ಸಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News