ಚೀನಾದಲ್ಲಿ strength ಪದದ ಸ್ಪೆಲ್ಲಿಂಗ್ ನಲ್ಲಿ ಎಡವಿದ ಪ್ರಧಾನಿ ಮೋದಿ

Update: 2018-05-17 17:36 GMT

ಸಂಕ್ಷಿಪ್ತ ಪದಬಳಕೆಯಲ್ಲಿ ಮೋದಿ ಚಾಣಾಕ್ಷ. TOP - ಟೊಮೆಟೊ, ಈರುಳ್ಳಿ, ಪೊಟ್ಯಾಟೊ ಎನ್ನುವುದರಿಂದ ಹಿಡಿದು, HIRA = ಹೈವೇ, ಐ-ವೇ, ರೋಡ್‍ವೇ, ಏರ್‍ವೇ..ಪ್ರತಿ ಸಂದರ್ಭದಲ್ಲೂ ಇಂಥ ಸಂಕ್ಷಿಪ್ತನಾಮವನ್ನು ಉದ್ಗರಿಸುತ್ತಾರೆ. ಇದುವರೆಗೆ ಅದು ಚೆನ್ನಾಗಿಯೇ ಇತ್ತು. ಆದರೆ ಮೋದಿ ಇದೀಗ ಹೆಚ್ಚು ಸಾಹಸದಿಂದ ದೊಡ್ಡ ಶಬ್ದಗಳ ಸಂಕ್ಷಿಪ್ತ ರೂಪಗಳ ಮೇಲೆ ಪ್ರಯೋಗ ಮಾಡುತ್ತಿದ್ದಾಗ ಅನಿರೀಕ್ಷಿತ ತೊಂದರೆಗೆ ಸಿಕ್ಕಿಹಾಕಿಕೊಂಡರು. ಅದು ಏನು ಗೊತ್ತೇ? ಶಬ್ದದ ಸ್ಪೆಲ್ಲಿಂಗ್ ನೆನಪಿಸಿಕೊಳ್ಳುವಲ್ಲಿ ಎಡವಿದರು.

ಮೋದಿ ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ ಅವಧಿಯ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನಿಯೋಗ ಮಟ್ಟದ ಮಾತುಕತೆಯ ವೇಳೆ, ಪ್ರಧಾನಿ ನರೇಂದ್ರ ಮೋದಿ ಎಂಟು ಅಕ್ಷರದ Strength (ಸ್ಟ್ರೆಂಥ್) ಎಂಬ ಪದದ ವಿಸ್ತೃತ ರೂಪವನ್ನು ನೀಡಲು ಪ್ರಯತ್ನಿಸಿದರು. ಆದರೆ ಸ್ಟ್ರೆಂಥ್ ಪದವನ್ನು STREANH ಎಂದು ಹೇಳಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.

ಮೋದಿ ಎಡವಿದ್ದರೇ ಎಂದು ದೃಢೀಕರಿಸಿಕೊಳ್ಳುವ ಸಲುವಾಗಿ ಮೂಲ ವೀಡಿಯೊವನ್ನು ಎಎನ್‍ಐ ಮತ್ತು ರಾಜ್ಯಸಭಾ ಟಿವಿಯಲ್ಲಿ ನೋಡಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿ ನಿಜ. ಇದೇ ತುಣುಕನ್ನು ಎಎನ್‍ಐ ವೀಡಿಯೊದಲ್ಲಿ ನೋಡಬಹುದಾಗಿದೆ.

ಬಳಿಕ ಮೋದಿ ಅದನ್ನು ಸರಿಪಡಿಸಿಕೊಳ್ಳಲು ತಡಕಾಡಿದರು. ಆದರೆ ಸ್ಟ್ರೆಂಥ್ ಪದವನ್ನು STRENGTH ಎಂದು ಸಂಬೋಧಿಸಿದರು. ಪ್ರಧಾನಿಗೆ ಜಾಗತಿಕ ವೇದಿಕೆಗಳಲ್ಲಿ ವಿಸ್ತೃತರೂಪದ ಶಬ್ದಗಳ ಸ್ಪೆಲ್ಲಿಂಗ್ ಜೋಡಿಸುವ ಕೆಲಸ ಏಕೆ ಬೇಕು?

ಎಸ್ ಎಂದರೆ ಸ್ಪಿರಿಚ್ಯುವ್ಯಾಲಿಟಿ; ಟಿ - ಟ್ರೆಡಿಷನ್, ಟ್ರೇಡ್ ಅಂಡ್ ಟೆಕ್ನಾಲಜಿ, ಆರ್- ರಿಲೇಶನ್‍ಶಿಪ್, ಇ- ಎಂಟರ್‍ಟೈನ್‍ಮೆಂಟ್, ಎನ್- ನೇಚರ್ ಕನ್ವರ್ಷನ್, ಜಿ- ಗೇಮ್ಸ್, ಟಿ- ಟೂರಿಸಂ & ಎಚ್- ಹೆಲ್ತ್ & ಹೀಲಿಂಗ್ ಎಂಬ ಅರ್ಥದಲ್ಲಿ ಮೋದಿ ಹೇಳಲು ಬಯಸಿದ್ದರು.

ಆದರೆ ಇನ್ನು ಮುಂದಾದರೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡುವಾಗ ಮೋದಿ ಇಂಥ ದುಸ್ಸಾಹಸಕ್ಕೆ ಕೈಹಾಕಬಾರದು.

ಕೃಪೆ : altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News