ನಾಳೆಯೇ ವಿಶ್ವಾಸಮತ ಯಾಚನೆ ಸೂಕ್ತ: ಸುಪ್ರೀಂಕೋರ್ಟ್ ಅಭಿಪ್ರಾಯ
Update: 2018-05-18 11:27 IST
ಹೊಸದಿಲ್ಲಿ, ಮೇ 18: ಯಾರಿಗೂ ಹೆಚ್ಚಿನ ಸಮಯಾವಕಾಶ ನೀಡಲು ಸಾಧ್ಯವಿಲ್ಲ. ನಾಳೆಯೇ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಚುನಾವಣೋತ್ತರ ಮೈತ್ರಿಗಿಂತ ಅತಿ ದೊಡ್ಡ ಪಕ್ಷ ಮುಖ್ಯ. ಸದನದಲ್ಲಿ ಬಹುಮತ ಸಾಬೀತು ಮಾಡಬೇಕು. ನಾವು ಯಾವುದೇ ರಾಜಕೀಯ ಪಕ್ಷ ಪರ ಇಲ್ಲ ಎಂದು ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.