ಅಮೆರಿಕ: ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಸಾವು

Update: 2018-05-19 15:07 GMT

ವಾಶಿಂಗ್ಟನ್, ಮೇ 19: ಅಮೆರಿಕದ ಟೆಕ್ಸಾಸ್ ರಾಜ್ಯದ ಸಾಂತಾ ಫೆ ಎಂಬಲ್ಲಿನ ಹೈಸ್ಕೂಲೊಂದರಲ್ಲಿ ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಮೃತರದಲ್ಲಿ 9 ಮಂದಿ ವಿದ್ಯಾರ್ಥಿಗಳು ಮತ್ತು ಒಬ್ಬರು ಶಿಕ್ಷಕ. ದಾಳಿ ನಡೆಸಿದ ವಿದ್ಯಾರ್ಥಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಗಾಯಗೊಂಡವರಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದ್ದಾರೆ ಎಂದು ಹ್ಯಾರಿಸ್ ಕೌಂಟಿಯ ಶರೀಫ್ ಎಡ್ ಗೊನ್ಸಾಲಿಸ್ ತಿಳಿಸಿದರು.

ಶಂಕಿತನನ್ನು 17 ವರ್ಷದ ಡಿಮಿಟ್ರಿಯಸ್ ಪಗೋರ್ಝಿಸ್ ಎಂಬುದಾಗಿ ಅಧಿಕಾರಿಗಳು ಗುರುತಿಸಿದ್ದಾರೆ. ಅವರು ಶಾಲೆಯ ಜೂನಿಯರ್ ಫುಟ್ಬಾಲ್ ತಂಡದ ಸದಸ್ಯನಾಗಿದ್ದಾನೆ ಹಾಗೂ ಸ್ಥಳೀಯ ಚರ್ಚೊಂದರ ನೃತ್ಯ ತಂಡದ ಸದಸ್ಯನಾಗಿದ್ದಾನೆ.

ದಾಳಿಗೆ ಕಾರಣವೇನು ಹಾಗೂ ಯಾವ ಶಸ್ತ್ರಗಳನ್ನು ಬಳಸಲಾಗಿದೆ ಎಂಬ ಕುರಿತ ಮಾಹಿತಿಗಳು ಲಭ್ಯವಾಗಿಲ್ಲ.

ಶಾಲೆಯ ಮೊದಲ ತರಗತಿ ನಡೆಯುತ್ತಿರುವಾಗ ಬೆಳಗ್ಗೆ ಸುಮಾರು 7:45ಕ್ಕೆ ಗುಂಡು ಹಾರಾಟ ಆರಂಭವಾಗಿದೆ. ಆರಂಭದಲ್ಲಿ ಬೆಂಕಿ ಎಚ್ಚರಿಕೆ ಕೇಳಿಸಿತು ಹಾಗೂ ತಾವು ತರಗತಿಗಳಿಗೆ ತೆರಳಿದಾಗ ಗಂಡು ಹಾರಾಟ ಆರಂಭವಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಕಳೆದುಕೊಂಡ!

ಸಹಪಾಠಿಗಳ ಮೇಲೆ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ತನ್ನಷ್ಟಕ್ಕೆ ತಾನು ಇರುತ್ತಿದ್ದ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

‘‘ಅವನು ಆತ್ಮಹತ್ಯೆ ಮಾಡಿಕೊಳ್ಳಲು ಉದ್ದೇಶಿಸಿದ್ದ. ಆದರೆ, ಗುಂಡಿನ ದಾಳಿ ನಡೆಸಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ’’ ಎಂದು ಸಹಪಾಠಿ ವಿದ್ಯಾರ್ಥಿ ಹೇಳಿದ್ದಾರೆ.

‘‘ಆದರೆ, ದಾಳಿ ನಡೆಸಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಅವನಿಗೆ ಇರಲಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News