ಆರ್‌ಸಿಬಿಗೆ 30 ರನ್‌ಗಳ ಸೋಲು

Update: 2018-05-19 14:11 GMT
 ರಾಹುಲ್ ತ್ರಿಪಾಠಿ ಔಟಾಗದೆ 80 ರನ್

  ಜೈಪುರ, ಮೇ 19: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 53ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 30 ರನ್‌ಗಳ ಸೋಲು ಅನುಭವಿಸಿದೆ.
ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 165 ರನ್‌ಗಳ ಸವಾಲನ್ನು ಪಡೆದ ಆರ್‌ಸಿಬಿ ತಂಡ 19.2 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟಾಗಿದೆ.
ಪಾರ್ಥಿವ್ ಪಟೇಲ್ ಔಟಾಗದೆ 33 ರನ್ ಮತ್ತು ಎಬಿಡಿವಿಲಿಯರ್ಸ್‌ (53) ಹೊರತುಪಡಿಸಿದರೆ ತಂಡದ ದಾಂಡಿಗರು ವಿಫಲರಾದರು.
ಇದಕ್ಕೂ ಮೊದಲು ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ರಾಹುಲ್ ತ್ರಿಪಾಠಿ ಔಟಾಗದೆ 80 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News