ಎನ್‌ಕೌಂಟರ್: ನಾಲ್ವರು ಶಂಕಿತ ಉಗ್ರರ ಸಾವು

Update: 2018-05-19 17:23 GMT

ಶ್ರೀನಗರ, ಮೇ 19: ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಫ್ರದು ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಸೇನೆ ಶನಿವಾರ ತಿಳಿಸಿದೆ.

ಶಂಕಿತ ಉಗ್ರರು ಇರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆಯಿಂದ 8-9 ಕಿ.ಮೀ. ದೂರದಲ್ಲಿರುವ ಶಾಹ್ ನಗ್ರಿ ವಿಲ್ಗಮ್‌ನ ಅರಣ್ಯದಲ್ಲಿ ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಶುಕ್ರವಾರ ಶೋಧ ಕಾರ್ಯಾಚರಣೆ ಸಂದರ್ಭ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದರು. ಸೇನೆ ಹಾಗೂ ಪೊಲೀಸರು ಪ್ರತಿದಾಳಿ ನಡೆಸಿದರು. ಇದರಿಂದ ಮೂವರು ಶಂಕಿತ ಉಗ್ರರು ಹತರಾದರು. ಶನಿವಾರ ಬೆಳಗ್ಗೆ ಇನ್ನೋರ್ವ ಉಗ್ರ ಹತನಾದ ಎಂದು ಸೇನಾಧಿಕಾರಿ ತಿಳಿಸಿದ್ದಾರೆ. ಶಂಕಿತ ಉಗ್ರರ ಗುರುತನ್ನು ಇನ್ನಷ್ಟೆ ಪತ್ತೆ ಹಚ್ಚಬೇಕಾಗಿದೆ.

ಈ ಶಂಕಿತ ಉಗ್ರರು ವಿದೇಶಿಯರು ಆಗಿರುವ ಸಾಧ್ಯತೆ ಇದೆ. ಕುಪ್ವಾರದ ಗಡಿ ನಿಯಂತ್ರಣ ರೇಖೆ ಮೂಲಕ ಭಾರತಕ್ಕೆ ನುಸುಳಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News