ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜಿಂದರ್ ಸಿಂಗ್

Update: 2018-05-19 17:36 GMT

ಹೊಸದಿಲ್ಲಿ, ಮೇ 19: ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜಿಂದರ್ ಸಿಂಗ್ ಅವರನ್ನು ನೇಮಿಸಲಾಗಿದೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿಯವರ ಪ್ರಕಟಣೆ ತಿಳಿಸಿದೆ.

ಶ್ರೀಮತಿ ಮರಿಯಮ್ಮ ಕೋಶಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸಿಂಗ್ ಅವರನ್ನು ನೇಮಿಸಲಾಗಿದ್ದು ಅವರು ಮೇ 19ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿಂದೆ ಹಾಕಿ ಇಂಡಿಯಾದ ಖಜಾಂಚಿಯಾಗಿದ್ದ ಸಿಂಗ್ ಪ್ರಸಕ್ತ ಜಮ್ಮು ಕಾಶ್ಮೀರ ಹಾಕಿ ಸಂಸ್ಥೆಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಾಕಿ ಇಂಡಿಯಾದ ಅಧ್ಯಕ್ಷರಾಗಿದ್ದ ನರೀಂದರ್ ಬಾತ್ರ 2016ರಲ್ಲಿ ಅಂತರಾಷ್ಟ್ರೀಯ ಹಾಕಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾದಾಗ ತೆರವಾದ ಹುದ್ದೆಗೆ ಮರಿಯಮ್ಮ ಕೋಶಿಯವರನ್ನು ಆಯ್ಕೆ ಮಾಡಲಾಗಿತ್ತು.

 ರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ್ತಿಯಾಗಿದ್ದ ಮರಿಯಮ್ಮ ಕಳೆದೆರಡು ದಶಕಗಳಿಂದ ಭಾರತದ ಹಾಕಿಗೆ ಬಹಳಷ್ಟು ಕೊಡುಗೆ ನೀಡಿದ್ದು ಅವರ ಸೇವೆಗೆ ಭಾರತೀಯ ಹಾಕಿ ಸಂಘಟನೆ ಕೃತಜ್ಞವಾಗಿದೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಷ್ತಾಕ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News