ನುಸ್ರತುಲ್ ಇಸ್ಲಾಂ ಇಂಟರ್ ನ್ಯಾಷನಲ್ ಯೂತ್ ಫೆಡರೇಶನ್: ನೂತನ ಸಮಿತಿ ಆಯ್ಕೆ

Update: 2018-05-20 08:58 GMT

ಮರ್ಧಾಳ, ಮೇ 20: ಮರ್ಧಾಳ ತಕ್ವಿಯತುಲ್ ಇಸ್ಲಾಂ ಜಮಾಅತ್ ನ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಇಂಟರ್ನಾಷನಲ್ ಯೂತ್ ಫೆಡರೇಷನ್  ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

ಅಬ್ದುಲ್ ಸಲಾಂ ಮರ್ಧಾಳ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ  ಹಬೀಬ್ ಉಸ್ತಾದ್  ದು:ವಾ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಹೈದರ್ ಮರ್ಧಾಳ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.

ಖಜಾಂಜಿ ಅಶ್ರಫ್ ಕೊಡಂಕಿರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಹಳೆಯ ಆಡಳಿತ ಸಮಿತಿಯನ್ನು ನಿಷ್ಕ್ರಿಯಗೊಳಿಸಿ 2018-19ರ ಸಾಲಿನ ಹೊಸ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಸಂಘಟನೆಯ ಪ್ರಧಾನ ಸಲಹೆಗಾರರಾಗಿ ಜಮಾಅತಿನ ಅಧ್ಯಕ್ಷರಾದ ಕೆ ಎಸ್ ಹಮೀದ್ ತಂಙಳ್ ಹಾಗೂ ಜಮಾಅತಿನ ಖತೀಬ್  ಹನೀಫ್ ಸಖಾಫಿ ಎಮ್ಮೆಮಾಡು ಅವರನ್ನು ನೇಮಿಸಲಾಯಿತು.

ಸಂಘಟನೆಯ ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕೆನರಾ ಅವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಮಹಮ್ಮದ್ ಸಿ.ಕೆ , ತಲ್ಹತ್ ಮಿತ್ತೋಡಿ , ಸಿರಾಜ್ ಕೊಡಿಕೊಂಡ ಹಾಗೂ ದಾವೂದ್ ಖಾನ್ ಪೆರ್ಲರವರನ್ನು ಸಂಘಟನೆಯ ಸಲಹೆಗಾರರಾಗಿ ನೇಮಿಸಲಾಯಿತು.

 ನಿಸಾರ್ ಖಾನ್ ರವರನ್ನು ಅಧ್ಯಕ್ಷರನ್ನಾಗಿಯೂ ರಝಾಕ್ ಮಿತ್ತೋಡಿ ಮತ್ತು ಮಹಮ್ಮದ್ ಹನೀಸ್ ಎಂ.ಎ ಅವರನ್ನು ಉಪಾಧ್ಯಕ್ಷರಾಗಿಯೂ ನೇಮಿಸಲಾಯಿತು.ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಹೈದರ್  ಮರ್ಧಾಳರವರನ್ನು ಪುನರಾಯ್ಕೆ ಮಾಡಲಾಯಿತು.

ಶರ್ಫುದ್ದೀನ್ ಮತ್ತು ಹನೀಫ್ ಸಾಲೆತ್ತಡ್ಕ ಅವರನ್ನು ಜತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಖಜಾಂಜಿಯಾಗಿ ಅಬ್ದುಲ್ ಸಲಾಂ, ಲೆಕ್ಕ ಪರಿಶೋಧಕರಾಗಿ ಶಂಶುದ್ದೀನ್ ಪಾಲತ್ತಡ್ಕರವರನ್ನು ಆಯ್ಕೆ ಮಾಡಲಾಯಿತು.

ಶಿಕ್ಷಣ ವಿಭಾಗದ ಚೇರ್ಮನ್ ಅಯ್ಯೂಬ್ ಮರುವಂತಿಲ, ಕನ್ವೀನರ್ ಅಬ್ದುಲ್ ರಹ್ಮಾನ್ ಮರ್ಧಾಳ, ಸಂಘಟನಾ ವಿಭಾಗದ ಚೇರ್ಮನ್ ಅಶ್ರಫ್ ಕೊಡಂಕಿರಿ, ಕನ್ವೀನರ್ ಸಿದ್ದೀಕ್ ನೆಕ್ಕಿತ್ತಡ್ಕ ಸಾಂತ್ವನ ವಿಭಾಗದ ಚೇರ್ಮನ್ ಹೈದರ್ ಪಾಲತ್ತಡ್ಕ, ಕನ್ವೀನರ್ ಜಾಫರ್ ಮಿತ್ತೋಡಿ, ಪಬ್ಲಿಕೇಷನ್ ವಿಭಾಗದ ಚೇರ್ಮನ್ ಹಬೀಬ್ ಮುಸ್ಲಿಯಾರ್ ಕನ್ವೀನರ್ ಶಬೀರ್ ಕೊಂಬಾರ್ ರವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಕೊನೆಗೆ ಸಭಾಧ್ಯಕ್ಷರು, ನೂತನ ಅಧ್ಯಕ್ಷರು ಹಾಗು ಗೌರವಾಧ್ಯಕ್ಷರು ಮಾತನಾಡಿದರು.  ಪ್ರಧಾನ ಕಾರ್ಯದರ್ಶಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News