×
Ad

ಸಿಬಿಐ ತನಿಖೆಗಾಗಿ ಬಿಜೆಪಿ ನಾಯಕ ಲಾಲಸಿಂಗ್ ನೇತೃತ್ವದಲ್ಲಿ ಜಾಥಾ

Update: 2018-05-20 21:14 IST

ಜಮ್ಮು,ಮೇ 20: ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆಗಾಗಿ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಚೌಧರಿ ಲಾಲಸಿಂಗ್ ಅವರ ನೇತೃತ್ವದಲ್ಲಿ ರವಿವಾರ ಕಥುವಾ ಜಿಲ್ಲೆಯಲ್ಲಿ ಜಾಥಾ ನಡೆಸಲಾಗಿದೆ.

ಸುಮಾರು ಐದು ಗಂಟೆಗಳ ಕಾಲ ಬರಿಗಾಲಿನಲ್ಲಿ ನಡೆದಿದ್ದ ಸಿಂಗ್ ಅವರ ಕಾಲುಗಳಲ್ಲಿ ಗುಳ್ಳೆಗಳೆದ್ದಿದ್ದರಿಂದ ಅವರ ಬೆಂಬಲಿಗರು ಒತ್ತಾಯದಿಂದ ವಾಹನದಲ್ಲಿ ಕುಳ್ಳಿರಿಸಿದ್ದರು.

ಪ್ರಕರಣದಲ್ಲಿ ಸಿಬಿಐ ತನಿಖೆಗಾಗಿ ರಾಜ್ಯ ಸರಕಾರದ ಮೇಲೆ ಒತ್ತಡವನ್ನು ಹೆಚ್ಚಿಸಲು ಈ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವರ್ಷದ ಜನವರಿಯಲ್ಲಿ ಪ್ರಕರಣದಲ್ಲಿ ನಿರಪರಾಧಿಗಳನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಹಿರಾನಗರದಲ್ಲಿ ಹಿಂದು ಏಕತಾ ಮಂಚ್ ನಡೆಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಸಿಂಗ್ ಮತ್ತು ಇನ್ನೋರ್ವ ಬಿಜೆಪಿ ಸಚಿವ ಚಂದ್ರಪ್ರಕಾಶ ಗಂಗಾ ಅವರು ಪಾಲ್ಗೊಂಡಿದ್ದು,ಇದು ವಿವಾದವನ್ನು ಸೃಷ್ಟಿಸಿದ ಬಳಿಕ ಇಬ್ಬರೂ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News